ಬೇಲ್ ರದ್ದಾಗುವ ಭೀತಿ, ದೇವಿಗೆ ಮೊರೆ: ಪತ್ನಿ ವಿಜಯಲಕ್ಷ್ಮೀ ಜೊತೆ ಕಾಮಾಕ್ಯದೇವಿ 'ದರ್ಶನ' ರಹಸ್ಯ..!

ಬೇಲ್ ರದ್ದಾಗುವ ಭೀತಿ, ದೇವಿಗೆ ಮೊರೆ: ಪತ್ನಿ ವಿಜಯಲಕ್ಷ್ಮೀ ಜೊತೆ ಕಾಮಾಕ್ಯದೇವಿ 'ದರ್ಶನ' ರಹಸ್ಯ..!

Published : Jul 31, 2025, 05:53 PM IST

ದರ್ಶನ್ ಕಳೆದ ವರ್ಷ ಜೂನ್​ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿದ್ರು. ಪತ್ನಿ ವಿಜಯಲಕ್ಷ್ಮೀ ದರ್ಶನ್​ಗೆ ಬೇಲ್ ಸಿಗೋದಕ್ಕೆ ಕಂಡ ಕಂಡ ವಕೀಲರ ಬಳಿ ಅಲೀತಾ ಇದ್ರು. ಈ ನಡುವೆ ಹಲವು ದೇವಸ್ಥಾನಗಳಿಗೆ ಹೋಗಿ ದೇವರ ಬಳಿಯೂ ಪತಿಯನ್ನ ಕಾಪಾಡು ಅಂತ ಮೊರೆಯಿಡ್ತಾ ಇದ್ರು.

ಬೆಂಗಳೂರಿನಲ್ಲಿ ದರ್ಶನ್ ಅಭಿಮಾನಿಗಳ ಜಟಾಪಟಿ ನಡೀತಾ ಇದ್ರೆ, ದರ್ಶನ್ ಮಾತ್ರ ಅದೇ ಸಮಯದಲ್ಲಿ ಅಸ್ಸಾಂನ ಕಾಮಾಕ್ಯ ದೇಗುಲಕ್ಕೆ ಹೋಗಿ ದರ್ಶನ ಮಾಡಿದ್ದಾರೆ. ಅಸಲಿಗೆ ದರ್ಶನ್ ಕಾಮಾಕ್ಯಕ್ಕೆ ಹೋಗಿದ್ದು ಒಂದು ಹರಕೆ ತೀರಿಸಲಿಕ್ಕೆ. ಈ ಶಕ್ತಿ ದೇವಿಯ ಸನ್ನಿಧಾನಕ್ಕೆ ದರ್ಶನ್​ರನ್ನ ಪತ್ನಿ ಕರೆದುಕೊಂಡು ಹೋಗಿದ್ದರ ಹಿಂದೆ ಒಂದು ರಹಸ್ಯ ಇದೆ..

ದರ್ಶನ್ ಅಸ್ಸಾಂನ ಹೆಸರಾಂತ ಶಕ್ತಿಪೀಠ ಕಾಮಾಕ್ಯಕ್ಕೆ ಹೋಗಿ ದೇವಿ ದರ್ಶನ ಪಡೆದುಕೊಂಡಿದ್ದಾರೆ. ಪತ್ನಿ ಸಮೇತರಾಗಿ ಕಾಮಾಕ್ಯಕ್ಕೆ ಹೋಗಿರೋ ದರ್ಶನ್, ಪತ್ನಿ ಕಟ್ಟಿಕೊಂಡಿದ್ದ ಹರಕೆಯನ್ನ ತೀರಿಸಿದ್ದಾರೆ. ಅಷ್ಟಕ್ಕೂ ದರ್ಶನ್ ಪತ್ನಿ ಕಟ್ಟಿಕೊಂಡ ಹರಕೆ ಬೇರೇನೂ ಅಲ್ಲ, ದರ್ಶನ್ ಜೈಲಿನಿಂದ ಹೊರಬರಲಿ ಅನ್ನೋದು.

ಹೌದು ದರ್ಶನ್ ಕಳೆದ ವರ್ಷ ಜೂನ್​ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿದ್ರು. ಪತ್ನಿ ವಿಜಯಲಕ್ಷ್ಮೀ ದರ್ಶನ್​ಗೆ ಬೇಲ್ ಸಿಗೋದಕ್ಕೆ ಕಂಡ ಕಂಡ ವಕೀಲರ ಬಳಿ ಅಲೀತಾ ಇದ್ರು. ಈ ನಡುವೆ ಹಲವು ದೇವಸ್ಥಾನಗಳಿಗೆ ಹೋಗಿ ದೇವರ ಬಳಿಯೂ ಪತಿಯನ್ನ ಕಾಪಾಡು ಅಂತ ಮೊರೆಯಿಡ್ತಾ ಇದ್ರು. ಆಗ ವಿಜಯಲಕ್ಷ್ಮೀಗೆ ಒಬ್ಬ ಜ್ಯೋತಿಷಿ ಕಾಮಾಕ್ಯಕ್ಕೆ ಹೋಗಿ ನಿನ್ನ ಬೇಡಿಕೆ ಈಡೇರುತ್ತೆ ಅನ್ನೋ ಸಲಹೆ ಕೊಟ್ಟರಂತೆ,

ಹೌದು ಕಾಮಾಕ್ಯ ದೇವಾಲಯವನ್ನ ದೇವಿಯ 51 ಶಕ್ತಿಪೀಠಗಳಲ್ಲಿ ಒಂದು ಅಂತ ಪರಿಗಣಿಸಲಾಗಿದೆ. ಜನಪ್ರಿಯ ಐತಿಹ್ಯಗಳ ಪ್ರಕಾರ, 'ಮಾತೆ ಸತಿ'ಯ ದೇಹದ 51 ತುಣುಕುಗಳು ಎಲ್ಲೆಲ್ಲಿ ಬಿದ್ದವೋ, ಆ ಸ್ಥಳಗಳನ್ನ ಶಕ್ತಿಪೀಠಗಳು ಅಂತ ಪರಿಗಣಿಸಲಾಗುತ್ತದೆ. ಅದೇ ಶಕ್ತಿಪೀಠಗಳ ಸಾಲಿನಲ್ಲಿ ಕಾಮಾಕ್ಯ ದೇವಸ್ಥಾನ ಕೂಡಾ ಸೇರುತ್ತದೆ. ತಾಂತ್ರಿಕ ಚಟಿವಟಿಕೆಗಳಿಗೂ ಇದು ಹೆಸರುವಾಸಿ.  ಮಾಟ ಮಂತ್ರಗಳನ್ನ ತೊಡೆದು ಹಾಕಲು, ದುಷ್ಟ ಶಕ್ತಿಗಳಿಂದ ಮುಕ್ತಿ ಪಡೆಯಲು ದೇಶದೆಲ್ಲೆಡೆಯಿಂದ ಭಕ್ತರು ಇಲ್ಲಿಗೆ ಬರ್ತಾರೆ.

ದರ್ಶನ್ ಪತ್ನಿ ಕೂಡ ಕಳೆದ ವರ್ಷ ನವೆಂಬರ್​ನಲ್ಲಿ ಇಲ್ಲಿಗೆ ಪೂಜೆ ಸಲ್ಲಿಸಿ ಹರಕೆ ಕಟ್ಟಿದ್ರು. ಅಚ್ಚರಿ ಅಂದ್ರೆ ಮುಂದೆ ಕೆಲವೇ ದಿನಗಳಲ್ಲಿ ದರ್ಶನ್​ಗೆ ಹೈಕೋರ್ಟ್​​ನಿಂದ ಬೇಲ್ ಸಿಕ್ಕಿತ್ತು. ಆಗ ವಿಜಯಲಕ್ಷ್ಮೀ ಕಾಮಾಕ್ಯ ದೇಗುಲದ ಫೋಟೋ ಹಂಚಿಕೊಂಡು ಧನ್ಯವಾದ ದೇವಿ ಅಂತ ಪೋಸ್ಟ್ ಹಾಕಿದ್ರು.

ಹೌದು ದರ್ಶನ್ ಗೆ ಸಿಕ್ಕಿರುವ ಬೇಲ್ ಈಗ ರದ್ದಾಗೋ ಭೀತಿ ಕಾಡ್ತಾ ಇದೆ. ಈ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆದಿದ್ದು ಇನ್ನೂ ಕೆಲವೇ ದಿನಗಳಲ್ಲಿ ತೀರ್ಪು ಹೊರಬೀಳಿದೆ. ಒಂದು ವೇಳೆ ಬೇಲ್ ರದ್ದಾದ್ರೆ ದರ್ಶನ್ ಮತ್ತೆ ಜೈಲು ಸೇರಬೇಕಾಗುತ್ತೆ. ಸೋ ವಿಜಯಲಕ್ಷ್ಮೀ ಪತಿಯನ್ನ ಕಾಮಾಕ್ಯ ದೇವಿಯ ಸನ್ನಿಧಾನಕ್ಕೆ ಕರೆತಂದು ಹರಕೆ ತೀರಿಸಿದ್ದಾರೆ. ಜೊತೆಗೆ ಮತ್ತೆ ದರ್ಶನ್ ಬಂಧನ ಆಗದೇ ಇರಲಿ ಅಂತ ಪ್ರಾರ್ಥನೆ ಸಲ್ಲಿಸಿದ್ದಾರೆ.

ದರ್ಶನ್ ಬೇಲ್​ ಪಡೆದು ಹೊರಬಂದ ಮೇಲೆ ಕೇರಳದ ಮಾಡಾಯಿಕಾವು ಭಗವತಿ, ಕೊಟ್ಟಿಯೂರು ಮಹಾದೇವ ಸನ್ನಿಧಾನದಲ್ಲೆಲ್ಲಾ ಪೂಜೆ ಸಲ್ಲಿಸಿದ್ದಾರೆ. ಮತ್ತೀಗ ಕಾಮಾಕ್ಯ ದೇವಿ ಸನ್ನಿಧಾನಕ್ಕೆ ಹೋಗಿ ಬಂದಿದ್ದಾರೆ. ಸಂಕಟ ಬಂದಾಗ ವೆಂಕಟ ರಮಣ ಅಂತ  ದೇವಸ್ಥಾನಗಳನ್ನ ಸುತ್ತು ಹಾಕ್ತಾ ಇದ್ದಾರೆ. ಆದ್ರೆ ನ್ಯಾಯಸ್ಥಾನ ಏನು ತೀರ್ಪು ಕೊಡುತ್ತೆ ಅನ್ನೋದ್ರ ಮೇಲೆ ದರ್ಶನ್ ಭವಿಷ್ಯ ನಿಂತುಕೊಂಡಿದೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

 

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
Read more