ಈ ಸಾಲನ್ನಿಟ್ಟುಕೊಂಡು ಅದೆಷ್ಟೋ ಜನರು ರೀಲ್ಸ್ ಮಾಡಿದ್ದಾರೆ. ಇದೀಗ ದಿ ಡೆವಿಲ್ ಟೀಂನವರು ಇದೇ ಸಾಲನ್ನ ಇಟ್ಟುಕೊಂಡು ಸಿನಿಮಾ ಹಾಡು ಮಾಡಿದ್ದಾರೆ. ಇದೇ ಆಗಸ್ಟ್ 15ಕ್ಕೆ ದಿ ಡೆವಿಲ್ ಮೊದಲ ಸಾಂಗ್ ರಿಲೀಸ್ ಆಗಲಿದ್ದು, ಅಜನೀಶ್ ಮ್ಯೂಸಿಕ್ನಲ್ಲಿ ಅನಿರುಧ್ ಶಾಸ್ತ್ರಿ ವಾಯ್ಸ್ನಲ್ಲಿ..
ನಟ ದರ್ಶನ್ (Darshan Thoogudeepa) ಬೇಲ್ ರದ್ದು ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ನ ತೀರ್ಪು ಯಾವ ಕ್ಷಣದಲ್ಲಿ ಬೇಕಾದ್ರೂ ಹೊರಬೀಳಬಹುದು. ಸೋ ದರ್ಶನ್ ಆ ಟೆನ್ಷನ್ನಲ್ಲಿರುವ ಟೈಂನಲ್ಲೇ ದಿ ಡೆವಿಲ್ ಸಿನಿಮಾದ ಫಸ್ಟ್ ಸಾಂಗ್ ಬರ್ತಾ ಇದೆ. ಅ ಹಾಡಿನ ಸಾಲು ಸದ್ಯ ನಟ ದರ್ಶನ್ ಸ್ಥಿತಿಗೆ ಹೇಳಿ ಮಾಡಿಸಿದಂತಿದೆ ಎನ್ನಬಹುದೇ?.
ಇದ್ರೆ ನೆಮ್ಮದಿಯಾಗ್ ಇರ್ಬೇಕ್.. ಈ ಸಾಲನ್ನ ಎಲ್ಲೋ ಕೇಳಿದ್ದೀವಲ್ಲಾ ಅಂತಿದ್ದೀರಾ..? ಸೋಷಿಯಲ್ ಮಿಡಿಯಾದಲ್ಲಿ ದರ್ಶನ್ ಉದುರಿಸಿದ ಈ ಅಣಿಮುತ್ತು ನಿಮ್ಮ ಕಿವಿಗೆ ಬಿದ್ದಿರಬಹುದು. ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಅನ್ನೋದನ್ನ ಕೇಳಿ ಇದ್ಯಾವುದೋ 'ದಾಸ ಸಾಹಿತ್ಯ' ಅಂದುಕೋಬೇಡಿ. ಇದು ನಮ್ಮ 'ದಾಸ' ಅಲಿಯಾಸ್ ದರ್ಶನ್ ಹೇಳಿದ ಮಾತು.
ಈ ಸಾಲನ್ನಿಟ್ಟುಕೊಂಡು ಅದೆಷ್ಟೋ ಜನರು ರೀಲ್ಸ್ ಮಾಡಿದ್ದಾರೆ. ಇದೀಗ ದಿ ಡೆವಿಲ್ ಟೀಂನವರು ಇದೇ ಸಾಲನ್ನ ಇಟ್ಟುಕೊಂಡು ಸಿನಿಮಾ ಹಾಡು ಮಾಡಿದ್ದಾರೆ. ಇದೇ ಆಗಸ್ಟ್ 15ಕ್ಕೆ ದಿ ಡೆವಿಲ್ ಮೊದಲ ಸಾಂಗ್ ರಿಲೀಸ್ ಆಗಲಿದ್ದು, ಅಜನೀಶ್ ಮ್ಯೂಸಿಕ್ನಲ್ಲಿ ಅನಿರುಧ್ ಶಾಸ್ತ್ರಿ ವಾಯ್ಸ್ನಲ್ಲಿ ಫಸ್ಟ್ ಸಿಂಗಲ್ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹೊರಬರಲಿದೆ.
ಇತ್ತ '[ದಿ ಡೆವಿಲ್' ಸಿನಿಮಾದ ಜಾಲಿ ಹಾಡು ಬರ್ತಾ ಇದ್ರೆ, ಅತ್ತ ದರ್ಶನ್ ಪಾಡು ಮಾತ್ರ ಭಯಂಕರ ಟೆನ್ಶನ್ನಲ್ಲಿದೆ. ಈಗಾಗ್ಲೇ ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತಿರೋ 'ಡಿ ಗ್ಯಾಂಗ್'ನ ಬೇಲ್ ರದ್ದು ಮಾಡಬೇಕು ಅಂತ ಸುಪ್ರೀಂ ಕೋರ್ಟ್ನಲ್ಲಿ ವಾದ ವಿವಾದ ನಡೆದಾಗಿದೆ. ಲಿಖಿತ ವಾದ ಕೂಡ ಸಲ್ಲಿಸಲಾಗಿದ್ದು ಮಂಗಳವಾರ ಅಥವಾ ಗುರುವಾರ ಅಂತಿಮ ತೀರ್ಪು ಬರಲಿದೆ.
ಇದೂವರೆಗೂ ಸುಪ್ರೀಂ ಕೋರ್ಟ್ನಲ್ಲಿ ನಡೆದಿರೋ ಬೆಳವಣಿಗೆಗಳನ್ನ ನೋಡಿದ್ರೆ ದರ್ಶನ್ ಬೇಲ್ ರದ್ದಾಗುವ ಸಾಧ್ಯತೆಯೇ ಹೆಚ್ಚಾಗಿದೆ. ಯಾಕಂದ್ರೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಈ ಕೇಸ್ನಲ್ಲಿ ಹೈಕೋರ್ಟ್ ಹೇಗೆ ತೀರ್ಮಾನ ಕೈಗೊಂಡಿದೆ ಅನ್ನೋದು ತನಗೆ ಅರ್ಥವಾಗಿಲ್ಲ ಅಂದಿದ್ದಾರೆ. ಹೈಕೋರ್ಟ್ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೌದು ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿದ್ದೇ ಆದ್ರೆ ದರ್ಶನ್ ಮತ್ತೆ ಜೈಲಿಗೆ ಹೋಗಬೇಕಾಗುತ್ತೆ. ಸೋ ಆಗಸ್ಟ್ 15ಕ್ಕೆ ದಿ ಡೆವಿಲ್ ಹಾಡು ರಿಲೀಸ್ ಆದ್ರೆ ಅತ್ತ ದರ್ಶನ್ ಅಂದರ್ ಆಗಬೇಕಾಗುತ್ತೆ. ಸ್ವಾತಂತ್ರೋತ್ಸವದ ದಿನವೇ ದರ್ಶನ್ ಮತ್ತೆ ಸ್ವಾತಂತ್ರ ಕಳೆದುಕೊಂಡು ಜೈಲು ಹಕ್ಕಿಯಾಗಬೇಕಾಗುತ್ತೆ.
ಒಟ್ಟಾರೆ ದರ್ಶನ್ ಆಡಿದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಅನ್ನೋ ಸಾಲು ಹಾಡಾಗಿ ಬರ್ತಾ ಇದೆ. ಆದ್ರೆ ಅದು ಬರುವ ಹೊತ್ತಿಗೆ ದಾಸನಿಗೆ ನೆಮ್ಮಿದಿಯಾಗಿ ಇರೋದಕ್ಕೆ ಆಗುತ್ತಾ..? ಕೋರ್ಟ್ ಅದಕ್ಕೆ ಅವಕಾಶ ಕೊಡುತ್ತಾ..? ಕಾದುನೋಡಬೇಕು.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..