ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?

ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?

Published : Dec 31, 2025, 01:21 PM IST
ದರ್ಶನ್ ಅಭಿನಯದ 'ಕಾಟೇರ' ಚಿತ್ರದ ಕಥಾನಾಯಕನಂತೆಯೇ, ನಟ ದರ್ಶನ್ ಇದೀಗ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದಾರೆ. ಚಿತ್ರದಲ್ಲಿನ ದುರಂತ ನಾಯಕನ ಪಾತ್ರವು ಅವರ ನಿಜ ಜೀವನದಲ್ಲಿಯೂ ಪ್ರತಿಫಲಿಸುತ್ತಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವರ್ಷಗಳ ಕಾಲ ನಡೆಯುವ ಸಾಧ್ಯತೆಯಿದೆ.

ದರ್ಶನ್ ನಟನೆಯ ಕಾಟೇರ ಸಿನಿಮಾ ತೆರೆಕಂಡು 2 ವರ್ಷ ಕಂಪ್ಲೀಟ್ ಆಗಿವೆ. ದರ್ಶನ್ ಅಭಿನಯದ ಚಿತ್ರಗಳಲ್ಲೇ  ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಕಾಟೇರ. ದುರಂತ ಅಂದ್ರೆ ಕಾಟೇರ ಸಿನಿಮಾದಲ್ಲಿ ಕೊಲೆ ಆರೋಪ ಹೊತ್ತು ನಾಯಕ ಜೈಲಿಗೆ ಹೋಗ್ತಾನೆ. ಆತ ರಿಲೀಸ್ ಆಗೋಹೊತ್ತಿಗೆ ವಯೋವೃದ್ಧನಾಗಿರ್ತಾನೆ. ಸದ್ಯದ ದರ್ಶನ್ ಸ್ಥಿತಿ ನೋಡ್ತಾ ಇದ್ರೆ ದರ್ಶನ್ ಲೈಫ್​ನಲ್ಲಿ ಕಾಟೇರ ಕಥೆಯೇ ನಡೀತಾ ಇದೆ.

ಯೆಸ್ ದರ್ಶನ್ ನಟನೆಯ ಕಾಟೇರ ಮೂವಿ ರಿಲೀಸ್ ಆಗಿ  ನಿನ್ನೆಗೆ ಎರಡು ವರ್ಷ ಕಂಪ್ಲೀಟ್ ಆಗಿವೆ. ಕಾಟೇರ ಚಿತ್ರವನ್ನ ನಿರ್ಮಿಸಿದ್ದ ರಾಕ್​ಲೈನ್ ಪಿಕ್ಚರ್ಸ್ ಹೊಸ ಟ್ರೈಲರ್ ವೊಂದನ್ನ ರಿಲೀಸ್ ಮಾಡಿ, ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದೆ. ಕಾಟೇರ ಸಿನಿಮಾ ದರ್ಶನ್ ಕರೀಯರ್​ನಲ್ಲೇ ಅತಿದೊಡ್ಡ ಸಕ್ಸಸ್ ಕಂಡ ಸಿನಿಮಾ. ಕೆಜಿಎಫ್, ಕಾಂತಾರ ಬಳಿಕ ಅತಿ ಹೆಚ್ಚು ಗಳಿಕೆ ಮಾಡಿದ ಅಪ್ಪಟ ಕನ್ನಡ ಸಿನಿಮಾ. ಬರೀ ಕರ್ನಾಟಕದಲ್ಲೇ ನೂರು ಕೋಟಿ ಅಧಿಕ ಗಳಿಸಿದ ಸಿನಿಮಾ.

ನಮ್ಮ ಮಣ್ಣಿನ ಕಥೆ.. ಅದಕ್ಕೆ ತಕ್ಕಂತೆ ದರ್ಶನ್ ಅಮೋಘ ಅಭಿನಯ.. ಫ್ಯಾನ್ಸ್​ನ ಖುಷಿಯಲ್ಲಿ ತೇಲಿಸಿದ್ವು. ಅಸಲಿಗೆ ಡೆವಿಲ್ ಬದಲು ಈಗ ಕಾಟೇರ ಬರಬೇಕಿತ್ತು, ಆಗ ತೋರಿಸ್ತಾ ಇದ್ವಿ ನಮ್ಮ ಗತ್ತು ಅಂತ ದಾಸನ ಫ್ಯಾನ್ಸ್ ಬೇಸರ ವ್ಯಕ್ತಪಡಿಸ್ತಾ ಇದ್ದಾರೆ.

ಹೌದು ಕಾಟೇರ ಸಿನಿಮಾದಲ್ಲಿ ನಾಯಕ ಕೊಲೆ ಮಾಡಿ ಜೈಲು ಸೇರ್ತಾನೆ. ಆತ ಬಿಡುಗಡೆ ಆಗುವ ಹೊತ್ತಿಗೆ ವಯೋವೃದ್ದನಾಗಿರ್ತಾನೆ. ಬೇಡಿ ತೊಟ್ಟು ಕೊಂಡು ದರ್ಶನ್ ಬರ್ತಿದ್ರೆ ಪುಣ್ಯಾತ್ಮ ಅಂತ ಜನ ಕೈ ಮುಗೀತಾರೆ.

ದುರಂತ ಅಂದ್ರೆ ರೀಲ್​ನಲ್ಲಿ ಬೇಡಿ ತೊಟ್ಟು, ಕಂಬಿ ಹಿಂದೆ ಹೋದ ದಾಸನಿಗೆ ರಿಯಲ್ ಲೈಫ್​ನಲ್ಲೂ ಕಂಬಿ ಹಿಂದೆ ಹೋಗುವಂತೆ ಆಗಿಬಿಟ್ತು. ಪ್ರಸ್ತುತ ದರ್ಶನ್ ಕೊಲೆ ಆರೋಪದಲ್ಲಿ ಎ-2 ಆಗಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಕೈದಿಯಾಗಿ ಜೀವನ ಸವೆಸ್ತಾ ಇದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್​​ನ ಟ್ರಯಲ್ ಈಗಾಗ್ಲೇ ಶುರುವಾಗಿದ್ದು, ಸೋಮವಾರ ಸೆಷೆನ್ಸ್ ಕೋರ್ಟ್ ನಲ್ಲಿ ದರ್ಶನ್ ಪರ ವಕೀಲರು ರೇಣುಕಾಸ್ವಾಮಿ ತಂದೆ-ತಾಯಿಯನ್ನ ಕ್ರಾಸ್ ಎಕ್ಸಾಮಿನೇಷನ್ ಮಾಡಿದ್ದಾರೆ.

ಅದೆಷ್ಟೇ ವೇಗವಾಗಿ ನಡೆದರೂ ಈ ಕೊಲೆ ಕೇಸ್ ವಿಚಾರಣೆ ಮುಕ್ತಾಯ ಆಗಲಿಕ್ಕೆ ವರ್ಷಗಳೇ ಬೇಕು. ಸೋ ದಾಸನ ಸ್ಥಿತಿ ಕಾಟೇರನಂತೆಯೇ ಆದ್ರೂ ಅಚ್ಚರಿಯಿಲ್ಲ ಅಂತಿದ್ದಾರೆ ಕಾನೂನು ಪಂಡಿತರು.

ಕಾಟೇರದಂತಹ ದೊಡ್ಡ ಸಕ್ಸಸ್ ಕಂಡ ಮೇಲೆ ನಾಯಕನ ಕರೀಯರ್ ಉತ್ತುಂಗಕ್ಕೆ ಹೋಗಬೇಕಿತ್ತು. ಆದ್ರೆ ದುರಂತ ಅಂದರೆ ಸಿನಿಮಾದ ಕಥಾನಾಯಕನಂತೆಯೇ ದಾಸ ಸೆರೆಮನೆ ಸೇರಿದ್ದಾನೆ. ನಿಜವಾದ ದುರಂತನಾಯಕ ಅನ್ನಿಸಿಕೊಂಡಿದ್ದಾನೆ..!

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
04:36ಕಾವ್ಯಾ ಶೈವ ಪರ ಗಿಲ್ಲಿ ಫೆವರಿಸಂ; ಇಷ್ಟು ದಿನ ಚೆನ್ನಾಗಿ ಆಡಿ, ಈಗ ಪಕ್ಷಪಾತ ಮಾಡಿದ್ರಾ Bigg Boss ಗಿಲ್ಲಿ ನಟ?
05:09ಗಿಲ್ಲಿಗಿಂತ ನನಗೆ ಹೆಚ್ಚು ಫ್ಯಾನ್ಸ್ ಇದ್ದಾರೆ; ಅವನು Bigg Boss ಶೋನಲ್ಲಿ ವ್ಯಕ್ತಿತ್ವವೇ ತೋರಿಸಿಲ್ಲ: ಮಾಳು ನಿಪನಾಳ
24:18ಬಿಗ್ ಬಾಸ್​ನಲ್ಲಿ ಮಂಡ್ಯದ ಗಂಡು ಗಿಲ್ಲಿಗೆ ಕಿಚ್ಚನ ಮೆಚ್ಚುಗೆ: ಬಿಗ್​ ಸ್ಕ್ರೀನ್​ನಲ್ಲಿ ಗಿಲ್ಲಿ ನಟನಿಗೆ ದಾಸನ ಅಪ್ಪುಗೆ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
Read more