ಬಿಟೌನ್ (Bollywood) ಸಿನಿ ಜಗತ್ತು ಈಗ ಹಾಟಿ ಕತ್ರಿನಾ ಕೈಫ್ (Katrina Kaif) ಹಾಗೂ ವಿಕ್ಕಿ ಕೌಶಲ್ (Vicky Kaushal) ಮದುವೆ ಮಾಡೋದಕ್ಕೆ ಸಿದ್ಧವಾಗ್ತಿದೆ.
ಬೆಂಗಳೂರು (ನ. 29): ಬಿಟೌನ್ (Bollywood) ಸಿನಿ ಜಗತ್ತು ಈಗ ಹಾಟಿ ಕತ್ರಿನಾ ಕೈಫ್ (Katrina Kaif) ಹಾಗೂ ವಿಕ್ಕಿ ಕೌಶಲ್ (Vicky Kaushal) ಮದುವೆ ಮಾಡೋದಕ್ಕೆ ಸಿದ್ಧವಾಗ್ತಿದೆ. ಕತ್ರಿನಾ ಕೈಫ್ ರಣಬೀರ್ ಕಪೂರ್(Ranbeer Kapoor) ಜೊತೆಗಿನ ಲವ್ ಬ್ರೇಕ್ಅಪ್ (Love Breakup) ಮಾಡಿಕೊಂಡ ನಂತರ, ಉರಿ ಸಿನಿಮಾ ಖ್ಯಾತಿಯ ವಿಕ್ಕಿ ಕೌಶಲ್ ತೆಕ್ಕೆಯಲ್ಲಿ ಬೆಚ್ಚಗೆ ಗೂಡು ಕಟ್ಟಿಕೊಳ್ಳಲು ಸಿದ್ಧರಾಗಿದ್ದಾರೆ. ವಿಕ್ಕಿ ಮತ್ತು ಕೈಫ್ ಡಿಸೆಂಬರ್ 9ರಂದು ಸಪ್ತಪದಿ ತುಳಿಯುತ್ತಿದ್ದಾರೆ. ರಾಜಸ್ಥಾನದಲ್ಲಿ ನಡೆಯುವ ಈ ಅದ್ಧೂರಿ ಮದುವೆಗೆ ಸಕಲ ಸಿದ್ಥತೆಗಳು ಭರದಿಂದ ಸಾಗಿದೆ.
ಕತ್ರೀನಾ ಮುಸ್ಲಿಮ್, ವಿಕ್ಕಿ ಕೌಶಲ್ ಹಿಂದು. ಅಷ್ಟಕ್ಕೂ ಈ ಜೋಡಿ ಮದುವೆ ಅದ್ಯಾವ ಸಂಪ್ರದಾಯದಂತೆ ನಡೆಯುತ್ತದೆ ಎಂಬ ಪ್ರಶ್ನೆಗಿನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ, ಸಾಂಪ್ರದಾಯಿಕ ಮದುವೆಗೂ ಮುನ್ನವೇ ಈ ಜೋಡಿ ಕೋರ್ಟ್ ಮ್ಯಾರೇಜ್ (Court Wedding) ಆಗುತ್ತಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಹೇಗಿದೆ ಈ ಬಾಲಿವುಡ್ ಬಿಂದಾಸ್ ಮದುವೆಯ ತಯಾರಿ?