ಚಿರಂಜೀವಿಗೂ ಈ ಕನ್ನಡತಿ ಮೇಲೆ ಕ್ರಶ್.. ಶ್ರೀದೇವಿ ಜೊತೆ ಹೋಲಿಸಿದ ನಾಗಾರ್ಜುನ; ಏನಿದು ರಶ್ಮಿಕಾ ಮಾಯೆ..!?

ಚಿರಂಜೀವಿಗೂ ಈ ಕನ್ನಡತಿ ಮೇಲೆ ಕ್ರಶ್.. ಶ್ರೀದೇವಿ ಜೊತೆ ಹೋಲಿಸಿದ ನಾಗಾರ್ಜುನ; ಏನಿದು ರಶ್ಮಿಕಾ ಮಾಯೆ..!?

Published : Jun 25, 2025, 06:37 PM IST

ರಶ್ಮಿಕಾ ದೇಶದೆಲ್ಲೆಡೆ ಇರೋ ಪಡ್ಡೆ ಹೈಕಳೆಲ್ಲರ ಪಾಲಿನ ಕ್ರಶ್ ಅನ್ನೋದು ಗೊತ್ತೇ ಇದೆ. ಆದ್ರೆ ಚಿರಂಜೀವಿಯಂಥಾ ಲೆಜೆಂಡ್ ರಶ್ಮಿಕಾ ಕಂಡ್ರೆ ತನಗೂ ಕ್ರಶ್ ಅಂದಿದ್ದಾರೆ. ಇಂಥಾ ಮೆಗಾಸ್ಟಾರ್ ಕಡೆಯಿಂದ ಬಂದಿರೋ ಮಾತುಗಳನ್ನ ಕೇಳಿ ರಶ್ಮಿಕಾ ನಾಚಿ ನೀರಾಗಿದ್ದಾರೆ.

ರಶ್ಮಿಕಾಗೆ ನ್ಯಾಷನಲ್ ಕ್ರಶ್ ಅನ್ನೋ ಬಿರುದು ಸಿಕ್ಕು ಬಹಳಾನೇ ದಿನವಾಯ್ತು.  ಆದ್ರೆ ಈಗ ಟಾಲಿವುಡ್​​ ಮೆಗಾಸ್ಟಾರ್ ಚಿರಂಜೀವಿ ಕೂಡ ತಮಗೆ ರಶ್ಮಿಕಾ ಮಂದಣ್ಣ (Rashmika Mandanna) ಮೇಲೆ ತಮಗೆ ಕ್ರಶ್ ಇದೆ ಅಂದಿದ್ದಾರೆ. ಚಿರು ಮಾತ್ರ ಅಲ್ಲ ನಾಗಾರ್ಜುನ, ಧನುಷ್ ಕೂಡ ರಶ್ಮಿಕಾನ ಹಾಡಿ ಹೊಗಳಿದ್ದಾರೆ. ಸೋ ಕುಬೇರ ಸಕ್ಸಸ್ ಖುಷಿಯಲ್ಲಿರೋ ರಶ್ಮಿಕಾ ಸಂತಸದ ಅಲೆಯಲ್ಲಿ ತೇಲ್ತಾ ಇದ್ದಾರೆ.

ಹೌದು, ನ್ಯಾಷನಲ್ ಕ್ರಶ್ ರಶ್ಮಿಕಾ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಕಳೆದ ವಾರ ರಶ್ಮಿಕಾ ನಟಿಸಿರೋ ಕುಬೇರ ಸಿನಿಮಾ ತೆರೆಗೆ ಬಂದಿರೋ ವಿಷ್ಯ ನಿಮಗೆ ಗೊತ್ತೇ ಇದೆ. ನಾಗಾರ್ಜುನ, ಧನುಷ್ ಮತ್ತು ರಶ್ಮಿಕಾ ನಟಿಸಿರೋ ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಮೂರೇ ದಿನಗಳಲ್ಲಿ ಸಿನಿಮಾ 50 ಕೋಟಿ ಗಳಿಕೆ ಮಾಡಿದೆ.

ಅಲ್ಲಿಗೆ ರಶ್ಮಿಕಾ ಅಕೌಂಟ್​​ನಲ್ಲಿ ಮತ್ತೊಂದು ಬಿಗ್ ಹಿಟ್ ಆಗಿದೆ. ರಶ್ಮಿಕಾ ಇದ್ರೆ ಸಿನಿಮಾ ಸಕ್ಸಸ್ ಆಗುತ್ತೆ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಸೋ ಹೈದ್ರಾಬಾದ್​​ನಲ್ಲಿ ಕುಬೇರ ಸಿನಿಮಾದ ಇವೆಂಟ್ ನಡೆದಿದ್ದು ಅದಕ್ಕೆ ಮೆಗಾಸ್ಟಾರ್ ಚಿರಂಜೀವಿ ಛೀಫ್ ಗೆಸ್ಟ್ ಆಗಿ ಬಂದಿದ್ದಾರೆ.

ರಶ್ಮಿಕಾ  ದೇಶದೆಲ್ಲೆಡೆ ಇರೋ ಪಡ್ಡೆ ಹೈಕಳೆಲ್ಲರ ಪಾಲಿನ ಕ್ರಶ್ ಅನ್ನೋದು ಗೊತ್ತೇ ಇದೆ. ಆದ್ರೆ ಚಿರಂಜೀವಿಯಂಥಾ ಲೆಜೆಂಡ್ ರಶ್ಮಿಕಾ ಕಂಡ್ರೆ ತನಗೂ ಕ್ರಶ್ ಅಂದಿದ್ದಾರೆ. ಇಂಥಾ ಮೆಗಾಸ್ಟಾರ್ ಕಡೆಯಿಂದ ಬಂದಿರೋ ಮಾತುಗಳನ್ನ ಕೇಳಿ ರಶ್ಮಿಕಾ ನಾಚಿ ನೀರಾಗಿದ್ದಾರೆ.

ಹೌದು, ಇದೇ ವೇದಿಕೆಯಲ್ಲಿ ಟಾಲಿವುಡ್​​ನ ಮತ್ತೊಬ್ಬ ದಿಗ್ಗಜ ಕಲಾವಿದರ ರಶ್ಮಿಕಾನ ಹೊಗಳಿದ್ದಾರೆ. ಆನ್​ಸ್ಕ್ರೀನ್ ರಶ್ಮಿಕಾ ಪ್ರೆಸೆನ್ಸ್ ನೋಡ್ತಾ ಇದ್ರೆ, ಕ್ಷಣಂ ಕ್ಷಣಂನಲ್ಲಿನ ಶ್ರೀದೇವಿ ನೋಡಿದಂತಾಗುತ್ತೆ ಅಂದಿದ್ದಾರೆ. ಅಲ್ಲಿಗೆ ಶ್ರೀದೇವಿಯಂಥಾ ಮಹಾನಟಿ ಜೊತೆ ರಶ್ಮಿಕಾರನ್ನ ಹೋಲಿಕೆ ಮಾಡಿದ್ದಾರೆ.

ಇನ್ನೂ ಕುಬೇರ ಪ್ರೀ ಲಾಂಚ್ ಇವೆಂಟ್​​ನಲ್ಲೇ ಧನುಷ್ ಕೂಡ ರಶ್ಮಿಕಾನ ಹಾಡಿ ಹೊಗಳಿದ್ರು. ನಾನು ಚಿಕ್ಕ ನಟ ನೀವು ಸಾವಿರಾರು ಕೋಟಿ ಗಳಿಸುವ ಸ್ಟಾರ್ ಅಂತ ಹೇಳ್ತಾ ರಶ್ಮಿಕಾನ ಹೊಗಳಿ ಅಟ್ಟಕ್ಕೇರಿಸಿದ್ರು.

ಅಲ್ಲಿಗೆ ಟಾಲಿವುಡ್, ಕಾಲಿವುಡ್​​ನ ಸೂಪರ್ ಸ್ಟಾರ್​​ಗಳೆಲ್ಲಾ ಪೈಪೋಟಿಗೆ ಬಿದ್ದಂತೆ ರಶ್ಮಿಕಾನ ಹೊಗಳ್ತಾ ಇದ್ದಾರೆ. ರಶ್ ಅದೆಷ್ಟು ಲಕ್ಕಿ ಗರ್ಲ್ ಅನ್ನೋದು ಗೊತ್ತೇ ಇದೆ. ಈಗ ಈ ಚೆಲುವೆಯ ಲಕ್ ಮತ್ತಷ್ಟು ಲಕ ಲಕ ಹೊಳೀತಾ ಇದೆ. ಸದ್ಯ ಕುಬೇರ ಸಿನಿಮಾದ ಸಕ್ಸಸ್ ಖುಷಿಯ ಜೊತೆಗೆ ಈ ದಿಗ್ಗಜರ ಕಾಂಪ್ಲಿಮೆಂಟ್ಸ್ ರಶ್ಮಿಕಾ ಕೆನ್ನೆ ಮತ್ತಷ್ಟು ಕೆಂಪೇರುವಂತೆ ಮಾಡಿವೆ..!

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
25:41ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
Read more