ಚಂದನ್ ಶೆಟ್ಟಿ ಲೈಫ್ ಈಸ್ ಕಸಿನೋ ಅನ್ನೋ ಹೊಸ ಆಲ್ಬಂ ಸಾಂಗ್ ಮಾಡ್ತಾ ಇದ್ದು, ಅದ್ರಲ್ಲಿ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಜ್ಜೆ ಹಾಕಲಿದ್ದಾರೆ. ಇದನ್ನ ಖುದ್ದು ಕ್ರಿಸ್ ಗೇಲ್ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ತನ್ನ ರ‍್ಯಾಪ್ ಸಾಂಗ್ಸ್ ಮೂಲಕ ಕನ್ನಡಿಗರ ತಲೆ ಗಿರ ಗಿರ ತಿರುಗುವಂತೆ ಮಾಡಿದವರು ರಾಪರ್ ಚಂದನ್ ಶೆಟ್ಟಿ. ತನ್ನ ಸಿಕ್ಸರ್ಗಳ ಮೂಲಕ ಆರ್ಸಿಬಿ ಫ್ಯಾನ್ಸ್ನ ಹುಚ್ಚೆಬ್ಬಿಸಿದವರು ಕ್ರಿಕೇಟರ್ ಕ್ರಿಸ್ ಗೇಲ್. ಈ ರಾಪರ್ & ಕ್ರಿಕೇಟರ್ ಈಗ ಒಂದಾಗಿದ್ದಾರೆ.. ಕುಣಿಯೋಕೆ ರೆಡಿಯಾಗಿ ಅಂತಿದ್ದಾರೆ.
ಯೆಸ್ ಒಬ್ರು ಹುಚ್ಚೆಬ್ಬಿಸುವ ಸಾಂಗ್ಸ್ ಮಾಡೋ ರಾಪರ್, ಇನ್ನೊಬ್ರು ಮೈದಾನಕ್ಕಿಳಿದ್ರೆ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸೋ ಕ್ರಿಕೆಟರ್. ಈ ಇಬ್ಬರೂ ಅಖಾಡಕ್ಕಿಳಿದ್ರೆ ಜನ ಹುಚ್ಚೆದ್ದು ಕುಣಿಯೋದು ಫಿಕ್ಸ್. ಇಂಥಾ ರಾಪರ್ ಅಂಡ್ ಕ್ರಿಕೇಟರ್ ಒಂದಾದ್ರೆ ಹೇಗಿರುತ್ತೆ ಹೇಳಿ..? ಈ ಸುದ್ದಿ ಕೇಳಿನೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಚಂದನ್ ಶೆಟ್ಟಿ ಲೈಫ್ ಈಸ್ ಕಸಿನೋ ಅನ್ನೋ ಹೊಸ ಆಲ್ಬಂ ಸಾಂಗ್ ಮಾಡ್ತಾ ಇದ್ದು, ಅದ್ರಲ್ಲಿ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಜ್ಜೆ ಹಾಕಲಿದ್ದಾರೆ. ಇದನ್ನ ಖುದ್ದು ಕ್ರಿಸ್ ಗೇಲ್ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಕ್ರಿಸ್ ಗೇಲ್ ಅಂದ್ರೆ ಕನ್ನಡಿಗರಿಗೆ ವಿಶೇಷ ಪ್ರೀತಿ. ಆರ್ಸಿಬಿ ಪರವಾಗಿ ಆಡ್ತಿದ್ದ ಕ್ರಿಸ್ ಗೇಲ್ಗೂ ಬೆಂಗಳೂರು ಅಂದ್ರೆ ಪ್ರಾಣ. ಇಂಥಾ ಕ್ರಿಸ್ ಗೇಲ್ ಮೈದಾನದಲ್ಲಷ್ಟೇ ಅಲ್ಲ ಮ್ಯೂಸಿಲ್ ಲೋಕದಲ್ಲೂ ಈಗಾಗ್ಲೇ ಸದ್ದು ಮಾಡಿದ್ದಾರೆ. ವಿ ಕಮ್ ಔಟ್ ಟು ಪಾರ್ಟಿ ಅನ್ನೋ ಜಮೈಕನ್ ಆಲ್ಬಂ ಸಾಂಗ್ನಲ್ಲಿ ಹೆಜ್ಜೆ ಹಾಕಿ ಎಲ್ಲರಿಗೂ ಶಾಕ್ ಕೊಟ್ಟಿದ್ರು ಯುನಿವರ್ಸ್ ಬಾಸ್.
ಜಮೈಕಾ ಟು ಇಂಡಿಯಾ ಅನ್ನೋ ಮ್ಯೂಸಿಕ್ ಆಲ್ಬಂನಲ್ಲೂ ಕ್ರಿಸ್ ಗೇಲ್ ಮಿಂಚಿದ್ದು ಇದು ಕೂಡ ಸಖತ್ ಸದ್ದು ಮಾಡಿತ್ತು. ಮತ್ತೀಗ ಇಂಥಾ ಗೇಲ್ ಜೊತೆ ನಮ್ಮ ರಾಪರ್ ಚಂದನ್ ಶೆಟ್ಟಿ ಕೈ ಜೋಡಿಸಿದ್ದಾರೆ. ಈ ಇಬ್ಬರೂ ಒಟ್ಟಾಗಿ ಲೈಫ್ ಈಸ್ ಕಸಿಸೋ ಅನ್ನೋ ಸಾಂಗ್ ಮಾಡ್ತಾ ಇದ್ದು, ಅದರ ಶೂಟಿಂಗ್ ಭರದಿಂದ ನಡೀತಾ ಇದೆ. ಇವರಿಬ್ಬರ ಕಾಂಬಿನೇಷನ್ನಲ್ಲಿ ಸಾಂಗ್ ಬರಲಿದೆ ಅಂದ್ರೆ ಈ ಸಾರಿ ಪಾರ್ಟಿ ರಂಗೇರುತ್ತೆ, ಮೂರೇ ಮೂರು ಪೆಗ್ ಅಲ್ಲ ಫುಲ್ ಬಾಟಲ್ ಕಿಕ್ಕಿರುತ್ತೆ ಅಂತ ಫ್ಯಾನ್ಸ್ ಕಾದು ಕೂತಿದ್ದಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ…