
ಸದ್ಯ ಈ ಗೋಲ್ಡ್ ಸುರೇಶ್ ವಿರುದ್ದ ಒಂದು ವಂಚನೆಯ ಆರೋಪ ಕೇಳಿ ಬಂದಿದೆ. ರಾಯಚೂರಿನ ಮಾನ್ವಿ ಪಟ್ಟಣದಲ್ಲಿ ಕೇಬಲ್ ಚಾನೆಲ್ ಸೆಟ್ ಮಾಡಿಕೊಡ್ತಿನಿ ಅಂತ ಮೈನುದ್ದಿನ್ ಅನ್ನೋ ಯುವಕನಿಂದ 14 ಲಕ್ಷಕ್ಕೆ ಅಗ್ರೀಮೆಂಟ್ ಮಾಡಿಕೊಂಡಿದ್ದರಂತೆ ಗೋಲ್ಡ್ ಸುರೇಶ್.
ಬಿಗ್ ಬಾಸ್ ಸೀಸನ್-11ನ ಮತ್ತೊಬ್ಬ ಸ್ಪರ್ಧಿಯ ವಿರುದ್ದ ಪೊಲೀಸ್ ದೂರು ದಾಖಲಾಗಿದೆ. ವಂಚನೆ ಕೇಸ್ನಲ್ಲಿ ಸಿಲುಕಿರೋ ಆ ದೊಡ್ಮನೆ ಸ್ಪರ್ಧಿ ಯಾರು..? ಏನವರ ಕೇಸು..? ಆ ಸ್ಟೋರಿ ಇಲ್ಲಿದೆ ನೋಡಿ.
ಈ ಸಾರಿಯ ಬಿಗ್ ಬಾಸ್ ಸೀಸನ್ನಲ್ಲಿ ಮೈ ತುಂಬಾ ಗೋಲ್ಡ್ ತೊಟ್ಟುಕೊಂಡು ಎಂಟ್ರಿ ಕೊಟ್ಟು ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದು ಹುಬ್ಬಳ್ಳಿ ಮೂಲದ ಸುರೇಶ್. ಮೈ ತುಂಬಾ ಗೋಲ್ಡ್ ಹಾಕ್ಕೊಂದು ತಿರುಗುವ ಇವರನ್ನ ಗೋಲ್ಡ್ ಸುರೇಶ್ ಅಂತಾನೇ ಕರೀತಾರೆ.
ಸದ್ಯ ಈ ಗೋಲ್ಡ್ ಸುರೇಶ್ ವಿರುದ್ದ ಒಂದು ವಂಚನೆಯ ಆರೋಪ ಕೇಳಿ ಬಂದಿದೆ. ರಾಯಚೂರಿನ ಮಾನ್ವಿ ಪಟ್ಟಣದಲ್ಲಿ ಕೇಬಲ್ ಚಾನೆಲ್ ಸೆಟ್ ಮಾಡಿಕೊಡ್ತಿನಿ ಅಂತ ಮೈನುದ್ದಿನ್ ಅನ್ನೋ ಯುವಕನಿಂದ 14 ಲಕ್ಷಕ್ಕೆ ಅಗ್ರೀಮೆಂಟ್ ಮಾಡಿಕೊಂಡಿದ್ದರಂತೆ ಗೋಲ್ಡ್ ಸುರೇಶ್. ಆದ್ರ ಹಣ ಪಡೆದು ಕೆಲಸವನ್ನೂ ಮಾಡಿಕೊಡದೇ ವಂಚನೆ ಮಾಡಿದ್ದಾರೆ ಅಂತ ಮೈನುದ್ದಿನ್ ದೂರು ನೀಡಿದ್ದಾನೆ.
1 ಲಕ್ಷ ಹಣ ವಾಪಾಸ್ ನೀಡಿ ಉಳಿದ ಹಣವನ್ನ ಕೊಡದೇ ಸತಾಯಿಸ್ತಾ ಇರೋ ಗೋಲ್ಡ್ ಸುರೇಶ್ ವಿರುದ್ದ ಕಂಪ್ಲೇಂಟ್ ಕೊಡೋದಕ್ಕೆ ಮುಂದಾಗಿದ್ದಾನೆ. ಈ ಹಿಂದೆ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ರೀಲ್ಸ್ ಮಾಡಿ ಜೈಲು ಸೇರಿದ್ರು. ಈಗ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ವಿರುದ್ದ ವಂಚನೆ ಆರೋಪ ಕೇಳಿಬಂದಿದೆ. ಸೋ ಸುರೇಶ್ ಕೂಡ ರಜತ್, ವಿನಯ್ ರೀತಿ ಕೃಷ್ಣ ಜನ್ಮಸ್ಥಾನಕ್ಕೆ ಸೇರ್ತಾರಾ ಕಾದುನೋಡಬೇಕು..
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..