ಕ್ಯಾಮೆರಾ ಕಂಡು ಕಾಲ್ಕಿತ್ತ ಬಿಪಾಶಾ ಬಸು; ಅಂದು ಓಡಿಬರೋರು ಇಂದು ಓಡಿಹೋಗಿದ್ದೇಕೆ?

ಕ್ಯಾಮೆರಾ ಕಂಡು ಕಾಲ್ಕಿತ್ತ ಬಿಪಾಶಾ ಬಸು; ಅಂದು ಓಡಿಬರೋರು ಇಂದು ಓಡಿಹೋಗಿದ್ದೇಕೆ?

Published : May 26, 2025, 02:57 PM ISTUpdated : May 26, 2025, 03:03 PM IST

2002ರಲ್ಲಿ ರಾಝ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಗೋದ್ರೊಂದಿಗೆ ಬಿಪಾಶಾಗೆ ಸ್ಟಾರ್ ಪಟ್ಟ ತಂದುಕೊಟ್ತು. ಇನ್ನೂ 2003ರಲ್ಲಿ ಬಂದ ಜಿಸ್ಮ್ ಮೂವಿಯಲ್ಲಿ ಬಿಪಾಶಾ ಹಸಿ ಬಿಸಿಯಾಗಿ ಕಾಣಿಸಿಕೊಂಡು ಪಡ್ಡೆಹೈಕಳ ಹೃದಯಕ್ಕೆ ಲಗ್ಗೆ ಇಟ್ಟಿದ್ರು. 

ಬಿಪಾಶಾಬಸು.. ಈ ಹೆಸರು ಕೇಳಿದ್ರೆ ಪಡ್ಡೆ ಹೈಕಳ ಕಿವಿ ನೆಟ್ಟಗಾಗುತ್ವೆ. ಒಂದು ಕಾಲದಲ್ಲಿ ತನ್ನ ಹಸಿ ಬಿಸಿ ಅವತಾರದಿಂದ ಬಾಲಿವುಡ್  ಬಿಚ್ಚಮ್ಮ ಅಂತ ಖ್ಯಾತಿ ಪಡೆದಿದ್ರು ಬಿಪಾಶಾ (Bipasha Basu) ಜೀರೋ ಸೈಜ್ ಸುಂದರಿಯಾಗಿದ್ದ ಬಿಪಾಶಾ ಈಗ ಹೇಗಾಗಿದ್ದಾರೆ ಗೊತ್ತಾ..?. ಇತ್ತೀಚಿಗೆ ಬಿಪಾಶಾನ ನೋಡಿದವರು.. ಅರೇ ಇವರು ಅವರೇನಾ ಅಂತ ಕನ್​ಪ್ಯೂಸ್ ಆಗಿದ್ದಾರೆ.

ಹೌದು, ಇತ್ತೀಚಿಗೆ ಸಿನಿಲೋಕದಿಂದ ಕೊಂಚ ದೂರವಾಗಿರೋ ಬಿಪಾಶಾ ಬಸು ಮುಂಬೈನಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಆದ್ರೆ ಅವರು ಇವರೇನಾ ಅಂತ ಅನುಮಾನ ಪಡ್ತಾನೆ ಶೂಟಿಂಗ್ ಮಾಡಿದ್ದಾರೆ ಪಾಪಾರಾಜಿಗಳು. ಯಾಕಂದ್ರೆ ಆಗ ಸೈಜ್ ಜೀರೋ ಸುಂದರಿಯಾಗಿದ್ದ ಬಿಪಾಶಾ ತೀರಾ ತೂಕ ಹೆಚ್ಚಿಸಿಕೊಂಡಿದ್ದಾರೆ. ಅರೇ ಇವರು ಅವರೇನಾ ಅಂತ  ಕ್ಯಾಮೆರಾಕಣ್ಣು ಬಿಡುವಷ್ಟರಲ್ಲಿ ಬಿಪಾಶಾ ಲಗುಬಯಿಂದ ಅಲ್ಲಿಂದ ಕಾರ್ ಏರಿ ಕಾಣೆಯಾಗಿದ್ದಾರೆ.

ಅಸಲಿಗೆ ದೆಹಲಿ ಬೆಡಗಿ ಬಿಪಾಶಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಅಜನಬಿ ಸಿನಿಮಾದಿಂದ. ಮೊದಲ ಚಿತ್ರದಲ್ಲೇ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಈ ಬಿಪಾಶಾ ತಾನು ಬಾಲಿವುಡ್ ಆಳಲಿಕ್ಕೆ ಬಂದ ಬ್ಯೂಟಿ ಅಂತ ಪ್ರೂವ್ ಮಾಡಿದ್ರು. ಶ್ವೇತವರ್ಣದ ಚೆಲುವೆಯರ ನಡುವೆ ಈ ಕೃಷ್ಣ ಸುಂದರಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡಿದ್ರು.

2002ರಲ್ಲಿ ರಾಝ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಗೋದ್ರೊಂದಿಗೆ ಬಿಪಾಶಾಗೆ ಸ್ಟಾರ್ ಪಟ್ಟ ತಂದುಕೊಟ್ತು. ಇನ್ನೂ 2003ರಲ್ಲಿ ಬಂದ ಜಿಸ್ಮ್ ಮೂವಿಯಲ್ಲಿ ಬಿಪಾಶಾ ಹಸಿ ಬಿಸಿಯಾಗಿ ಕಾಣಿಸಿಕೊಂಡು ಪಡ್ಡೆಹೈಕಳ ಹೃದಯಕ್ಕೆ ಲಗ್ಗೆ ಇಟ್ಟಿದ್ರು.

ರೇಸ್ , ಫಿರ್ ಹೇರಾಫೇರಿ, ಕಾರ್ಪೊರೇಟ್, ಓಂಕಾರ ಸೇರಿದಂತೆ ಬಿಪಾಶಾ ಅಕೌಂಟ್​ನಲ್ಲಿ ಲೆಕ್ಕವಿಲ್ಲದಷ್ಟು ಹಿಟ್ ಸಿನಿಮಾಗಳಿವೆ. 2016ರಲ್ಲಿ ಮದುವೆಯಾದ ಮೇಲೆ ಬಿಪಾಶಾ ಬಣ್ಣ ಲೋಕದಿಂದ ಕೊಂಚ ಕೊಂಚವೇ ದೂರವಾದ್ರು. ಸದ್ಯ ತಾಯ್ತನವನ್ನ ಎಂಜಾಯ್ ಮಾಡ್ತಾ ಇರೋ ಬಿಪಾಶಾ ಬಹುಕಾಲದ ಬಳಿಕ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

ಒಂದು ಕಾಲದಲ್ಲಿ ಸೈಜ್ ಜೀರೋ ಸುಂದರಿಯಾಗಿದ್ದ ಬಿಪಾಶಾ ಈ ಪರಿ ದಪ್ಪ ಆಗಿರೋದನ್ನ ಕಂಡು ಟ್ರೋಲ್ ಮಾಡಲಾಗ್ತಾ ಇದೆ. ಈ ಬಗ್ಗೆ ಸಿಕ್ಕಾಪಟ್ಡೆ ಮೀಮ್ಸ್ ಹರಿದಾಡ್ತಾ ಇವೆ. ಆದ್ರೆ ಹೆರಿಗೆಯ ನಂತರ ಹೆಣ್ಣುಮಕ್ಕಳ ತೂಕ ಹೆಚ್ಚೋದು ಸಹಜ. ಹಾರ್ಮೋನ್​ಗಳ ಅಸಮತೋಲನದಿಂದ ಅನೇಕ ಮಹಿಳೆಯರು ದಪ್ಪ ಆಗ್ತಾರೆ. ಸೋ ತೂಕವನ್ನ ನೆಪವಾಗಿಟ್ಟುಕೊಂಡು ಹೆಣ್ಣನ್ನ ಟ್ರೋಲ್ ಮಾಡೋದು ಎಷ್ಟು ಸರಿ ಅಂತ ಫ್ಯಾನ್ಸ್ ಬಿಪಾಶಾ ಬೆಂಬಲಕ್ಕೆ ನಿಂತುಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ…

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
Read more