ನಿಜವಾಯ್ತಾ ವಿಜಯ್-ತ್ರಿಷಾ ಡೇಟಿಂಗ್ ವದಂತಿ? ಸಿನಿಮಾ ರಾಜಕೀಯ ರಂಗದಲ್ಲಿ ಬಿಸಿ ಚರ್ಚೆ

ನಿಜವಾಯ್ತಾ ವಿಜಯ್-ತ್ರಿಷಾ ಡೇಟಿಂಗ್ ವದಂತಿ? ಸಿನಿಮಾ ರಾಜಕೀಯ ರಂಗದಲ್ಲಿ ಬಿಸಿ ಚರ್ಚೆ

Published : Jun 25, 2025, 10:38 PM IST

ವಿಜಯ್ ಮತ್ತು ತ್ರಿಶಾ ನಡುವಿನ ಸಂಬಂಧದ ಬಗ್ಗೆ ಹರಿದಾಡುತ್ತಿರುವ ಗಾಸಿಪ್‌ಗಳಿಗೆ ತ್ರಿಶಾ ಅವರ ಇತ್ತೀಚಿನ ಬರ್ತ್‌ಡೇ ವಿಶ್ ಮತ್ತಷ್ಟು ಬಲ ತುಂಬಿದೆ. ವಿಜಯ್ ಮತ್ತು ತ್ರಿಶಾ ನಡುವೆ ನಿಜಕ್ಕೂ ಏನು ನಡೆಯುತ್ತಿದೆ ಎಂಬುದು ಕುತೂಹಲ ಮೂಡಿಸಿದೆ.

ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ರಿಲೇಷನ್ ಶಿಪ್​​ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಬಹುದಿನಗಳಿಂದ ವದಂತಿಯೊಂದು ಹರಿದಾಡ್ತಾನೇ ಇದೆ. ಇತ್ತೀಚಿಗೆ ವಿಜಯ್ ಬರ್ತ್​​ಡೇಗೆ ತ್ರಿಷಾ ವಿಶ್ ಮಾಡಿದ್ದು, ಅದ್ರಲ್ಲಿ ವಿಜಯ್ ತ್ರಿಶಾ ಮನೆಯಲ್ಲಿರೋದನ್ನ ಕಾಣಬಹುದು. ಅಲ್ಲಿಗೆ ಇವರಿಬ್ಬರ  ಡೇಟಿಂಗ್ ಗಾಸಿಪ್​ಗೆ ಈ ಫೋಟೋ ಮತ್ತಷ್ಟು ಬಲ ಕೊಟ್ಟಿದೆ.

ಯೆಸ್ ಕಾಲಿವುಡ್ ಅಂಗಳದಲ್ಲಿ ಇತ್ತೀಚಿಗೆ ವಿಜಯ್ ಮತ್ತು ತ್ರಿಶಾ ಬಗ್ಗೆ ಕೇಳಿ ಬರ್ತಾ ಇರೋ ಗುಸು ಗುಸು ಬಗ್ಗೆ ನಿಮಗೆ ಗೊತ್ತೇ ಇದೆ. ಇತ್ತೀಚಿಗೆ ದಳಪತಿ & ತ್ರಿಶಾ ಶ್ಯಾನೇ ಕ್ಲೋಸ್ ಆಗಿದ್ದಾರೆ. ಮೊನ್ನೆಯಷ್ಟೇ ವಿಜಯ್ ಬರ್ತ್​ಡೇಗೆ ವಿಶ್ ಮಾಡಿರೊ ತ್ರಿಶಾ ತಮ್ಮ ಮನೆಯಲ್ಲಿ ವಿಜಯ್ ಇರೋ ಫೊಟೋನ ಪೋಸ್ಟ್ ಮಾಡಿದ್ದಾರೆ. ಅದ್ರಲ್ಲಿ ವಿಜಯ್ , ತ್ರಿಶಾಳ ಮುದ್ದಿನ ನಾಯಿಯನ್ನ ಮುದ್ದು ಮಾಡ್ತಾ ಇದ್ದಾರೆ.

ಅಸಲಿಗೆ ತ್ರಿಶಾ & ವಿಜಯ್ ಏನೂ ಹೊಸದಾಗಿ ಪರಿಚಿತರಾದವರಲ್ಲ. 2004ರಲ್ಲೇ ಈ ಇಬ್ಬರೂ ಮೊದಲ ಬಾರಿ ಗಿಲ್ಲಿ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ರು. ಗಿಲ್ಲಿ ಮೂವಿ ಸೂಪರ್ ಡೂಪರ್ ಹಿಟ್ ಆಗಿ ಇವರದ್ದು ಹಿಟ್ ಪೇರ್ ಅನ್ನಿಸಿಕೊಂಡಿತ್ತು.

ಇನ್ನೂ 2005 ಮತ್ತು 2006ರಲ್ಲಿ ತಿರುಪಾಚಿ, ಆತಿ ಸಿನಿಮಾಗಳಲ್ಲಿ ಕೂಡ ವಿಜಯ್ ಹಾಗೂ ತ್ರಿಶಾ ಜೋಡಿಯಾಗಿ ನಟಿಸಿ ಮೋಡಿ ಮಾಡಿದ್ರು. 2008ರಲ್ಲಿ ಮತ್ತೆ ಕುರುವಿ ಮೂವಿನಲ್ಲಿ ಜೊತೆಯಾಗಿ ಮಿಂಚಿದ್ರು. ಇತ್ತೀಚಿಗೆ 15 ವರ್ಷಗಳ ನಂತರ ಮತ್ತೆ ಲಿಯೋ ಸಿನಿಮಾದಲ್ಲಿ ಇಬ್ಬರೂ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ರು.

ಲಿಯೋ ನಂತರ ಇಬ್ಬರೂ ಮತ್ತೆ ಆತ್ಮೀಯರಾಗಿದ್ದಾರೆ. ವಿಜಯ್​ಗೆ 1999ರಲ್ಲೇ ಮದುವೆ ಆಗಿದೆ. ಈ ದಂಪತಿಗಳಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ತ್ರಿಶಾ ಇನ್ನೂ ಅವಿವಾಹಿತೆಯಾಗೇ ಉಳಿದಿದ್ದಾರೆ. ವಯಸ್ಸು 42 ಅದ್ರೂ ಈಗಲೂ ಕಾಲಿವುಡ್​​ನಲ್ಲಿ ಬಹುಬೇಡಿಕೆಯ ನಟಿಮಣಿಯಾಗಿದ್ದಾರೆ.

ಇನ್ನೂ ವಿಜಯ್  ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು  ತಮಿಳಿಗ ವೆಟ್ರಿ ಕಳಗಂ ಅನ್ನೋ ಪಕ್ಷ ಕಟ್ಟಿ ತಮಿಳುನಾಡಿನಲ್ಲಿ ದೊಡ್ಡ ಸಂಚಲನ ಮೂಡಿಸಿದ್ದಾರೆ. ಸದ್ಯ ಜನನಾಯಗನ್ ಸಿನಿಮಾ ಮಾಡ್ತಾ ಇದ್ದು ಆ ಬಳಿಕ ಫುಲ್ ಟೈಂ ಪಾಲಿಟಿಕ್ಸ್​​ನಲ್ಲಿ ಅಕ್ಟಿವ್ ಆಗಲಿದ್ದಾರೆ.

ಇಂಥಾ ಟೈಂನಲ್ಲಿ ವಿಜಯ್-ತ್ರಿಶಾ ಬಗ್ಗೆ ಹರಡಿರೋ ಗುಸು ಗುಸು ಜಸ್ಟ್ ತಮಿಳು ಸಿನಿರಂಗದಲ್ಲಿ ಮಾತ್ರ ಅಲ್ಲ ರಾಜಕೀಯ ರಂಗದಲ್ಲೂ ಸದ್ದು ಮಾಡ್ತಾ ಇದೆ. ಕಳೆದ ವರ್ಷ ವಿಜಯ್ ತ್ರಿಶಾ ಗೋವಾ ಏರ್​​ಪೋರ್ಟ್​​ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಫೋಟೋನ ಲೀಕ್ ಮಾಡಿದ್ದು ಆಡಳಿತ ಪಕ್ಷ ಡಿಎಂಕೆ ಅಂತ ಅನೇಕ ರಾಜಕೀಯ ನಾಯಕರು ಆರೋಪ ಮಾಡಿದ್ರು.

ಇಷ್ಟೆಲ್ಲಾ ಅಂತೆ ಕಂತೆಗಳ ನಡುವೆ ಮೊನ್ನೆ ವಿಜಯ್ ಬರ್ತ್​ಡೇಗೆ ತ್ರಿಶಾ ವಿಶ್ ಮಾಡಿರೋದು ಮತ್ತೆ ಈ ಜೋಡಿ ಬಗ್ಗೆ ಜೋರು ಚರ್ಚೆ ಹುಟ್ಟಿಸಿದೆ. ವಿಜಯ್ - ತ್ರಿಶಾ ನಡುವೆ ನಿಜಕ್ಕೂ ಏನ್ ನಡೀತ ಇದೆ..? ಅನ್ನೋದನ್ನ ಖದ್ದು ಅವರೇ ಹೇಳಬೇಕು.

25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
06:50ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
06:51BBK 12: ಎಲ್ಲಿಗೋ ವೈರಿಂಗ್​, ಇನ್ನೆಲ್ಲೋ ಲೈಟಿಂಗ್! ಗಿಲ್ಲಿ-ಕಾವ್ಯಾ ಸ್ನೇಹದಲ್ಲಿ ಅನಿರೀಕ್ಷಿತ ತಿರುವು!
21:30BBK 12: ಮಾಳು ಸ್ಟ್ರೈಟ್ ಹಿಟ್! ಉತ್ತರ ಕರ್ನಾಟಕ ಹೈದನ ಮೇಲೆ ಗರಂ ಆದ ಗಿಲ್ಲಿ ನಟ ಫ್ಯಾನ್ಸ್
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
Read more