ಕ್ಲಾಸಿಕ್ 'ಶೋಲೆ'ಗೆ 50ರ ಸಂಭ್ರಮ; 4K ರೂಪದಲ್ಲಿ ಮತ್ತೆ ಬರಲಿದ್ಯಾ ಅಮಿತಾಭ್ ಬಚ್ಚನ್ ಹಿಟ್ ಮೂವಿ?

ಕ್ಲಾಸಿಕ್ 'ಶೋಲೆ'ಗೆ 50ರ ಸಂಭ್ರಮ; 4K ರೂಪದಲ್ಲಿ ಮತ್ತೆ ಬರಲಿದ್ಯಾ ಅಮಿತಾಭ್ ಬಚ್ಚನ್ ಹಿಟ್ ಮೂವಿ?

Published : Aug 14, 2025, 04:29 PM ISTUpdated : Aug 14, 2025, 04:47 PM IST

ಶೋಲೆ ಸಿನಿಮಾ ಬೆಂಗಳೂರಿನಲ್ಲೂ 2 ವರ್ಷಗಳ ಕಾಲ ಪ್ರದರ್ಶನ ಕಂಡಿತ್ತು. ಆಗ ಎಲ್ಲಿ ನೋಡಿದ್ರೂ ಏ ದೋಸತಿ ಹಮ್ ನಹಿ ತೋಡೆಂಗೆ , ಮೆಹೆಬೂಬಾ ಓ ಮೆಹೆಬೂಬಾ ಹಾಡುಗಳೇ ಕೇಳಿ ಬರ್ತಾ ಇದ್ವು. ಕನ್ನಡ ಚಿತ್ರರಂಗದ ಅನೇಕ ತಾರೆಯರು ಕೂಡ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ರು.

ಶೋಲೆ.. ಭಾರತೀಯ ಸಿನಿರಂಗದ ಕಲ್ಟ್ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದು. ಮುಂಬೈನ ಚಿತ್ರಮಂದಿರವೊಂದಲ್ಲಿ ಬರೊಬ್ಬರಿ 5 ವರ್ಷ ಓಡಿದ್ದ ಅಮಿತಾಭ್ ಬಚ್ಚನ್‌ರ (Amitabh Bachchan) ಈ ಸಿನಿಮಾ , ಇಡೀ ಭಾರತದಾದ್ಯಂತ ಯಶಸ್ಸು ಕಂಡಿತ್ತು. ಇಂಡಿಯನ್ ಸಿನಿ ಇಂಡಸ್ಟ್ರಿಯ ಹಾದಿಯನ್ನೇ ಬದಲಿಸಿತ್ತು. ಇಂಥಾ ಕ್ಲಾಸಿಕ್ ಸಿನಿಮಾಗೀಗ 50ರ ಸಂಭ್ರಮ.

ಇಂಡಿಯನ್ ಸಿನಿಇಂಡಸ್ಟ್ರಿ ಇತಿಹಾಸದಲ್ಲಿ ಮೈಲಿಗಲ್ಲು ಅನ್ನಿಸಿಕೊಂಡಿರೋ ಶೋಲೆ ಸಿನಿಮಾ ತೆರೆಕಂಡು 50 ವರ್ಷಗಳು ತುಂಬಿವೆ. ಆಗಸ್ಟ್ 15. 1975ರಂದು ಈ ಸಿನಿಮಾ ತೆರೆಗೆ ಬಂದಿತ್ತು. ಆರಂಭದಲ್ಲಿ ಸಿನಿಮಾ ಬಗ್ಗೆ ಅಂಥಾ ಒಳ್ಳೆಯ ರೆಸ್ಪಾನ್ಸ್ ಏನೂ ಬಂದಿರಲಿಲ್ಲ. ಆದ್ರೆ ಶೋಲೆ ಸಿನಿಮಾದ ಬಗ್ಗೆ ನಿಧಾನಕ್ಕೆ ಒಳ್ಳೆಮಾತುಗಳು ಕೇಳಿ ಬರಲಿಕ್ಕೆ ಶುರುವಾದವು. ಸಿನಿಮಾ ಹಾಗಿದೆಯಂತೆ ಹೀಗಿದೆಯಂತೆ ಅಂತ ನೋಡಿದವರು ವರ್ಣಿಸಲಿಕ್ಕೆ ಶುರುಮಾಡಿದ್ರು. ಅದೇನಿದೆಯೋ ನೋಡೇಬಿಡೋಣ ಅಂತ ಚಿತ್ರಮಂದಿರಕ್ಕೆ ಹೋದ ಮಂದಿ ಶೋಲೆ ನೋಡಿ ಬೆರಗಾಗಿ ಹೋಗಿದ್ರು.

ಬಹುಶಃ ಜಗತ್ತಿನ ಯಾವುದೇ ಚಿತ್ರೋದ್ಯಮದಲ್ಲೀ ಇಂಥಾ ದಾಖಲೆ ಬರೆದ ಮೊದಲ ಚಿತ್ರ ಇದು. ಮುಂಬೈನ ಮಿನರ್ವಾ ಚಿತ್ರಮಂದಿರದಲ್ಲಿ ಶೋಲೆ ಸಿನಿಮಾ ಬರೊಬ್ಬರಿ 5 ವರ್ಷಗಳ ಕಾಲ ಪ್ರದರ್ಶನ ಕಂಡಿತ್ತು. ಅಲ್ಲಿವರೆಗೂ ಇಂಡಿಯನ್ ಸಿನಿಲೋಕದಲ್ಲಿ ಸಿಲ್ವರ್ ಜುಬಲಿ, ಗೋಲ್ಡನ್ ಜುಬಲಿ ಎಲ್ಲಾ ಗೊತ್ತೇ ಇರಲಿಲ್ಲ. ಅವುಗಳಿಗೆಲ್ಲಾ ಮುನ್ನುಡಿ ಬರೆದಿದ್ದೇ ಈ

ಶೋಲೆ ಭಾರತದಲ್ಲಿ ಇಷ್ಟು ದೊಡ್ಡ ಯಶಸ್ಸು ಕಂಡು, ಜನ ಮುಗಿಬಿದ್ದು ನೋಡ್ತಾ ಇದ್ದ ಕಾಲದಲ್ಲಿ , ಪಕ್ಕದ ಪಾಕಿಸ್ತಾನದಿಂದಲೂ ಜನ ರೈಲಿನಲ್ಲಿ ಭಾರತದ ಗಡಿ ರಾಜ್ಯಗಳಿಗೆ ಬಂದು ಸಿನಿಮಾ ನೋಡಿಕೊಂಡು ಹೋಗ್ತಾ ಇದ್ರಂತೆ. ಹಾಗಿತ್ತು ಶೋಲೆ ಹುಟ್ಟಿಸಿದ ಆಕರ್ಷಣೆ

ಶೋಲೆ ಸಿನಿಮಾದ ಕಥೆ ಬರೆದಿದ್ದು ಸಲೀಂ ಜಾವೇದ್ ಜೋಡಿ. ಚಂಬಲ್ ಕಣಿವೆ ಕುರಿತ ಪುಸ್ತಕವೊಂದನ್ನ ಓದಿ, ಅದರ ಸ್ಪೂರ್ತಿಯೊಂದಿಗೆ ಒಂದು ಕೌಬಾಯ್ ಸ್ಟೈಲ್ ರಿವೇಂಜ್ ಕಥೆಯನ್ನ ಬರೆದಿತ್ತು ಈ ಜೋಡಿ. ಇದನ್ನ ಅದ್ಭುತವಾಗಿ ತೆರೆಗೆ ತಂದವರು ನಿರ್ದೇಶಕ ರಮೇಶ್ ಸಿಪ್ಪಿ. ಇನ್ನೂ 'ಗಬ್ಬರ್', 'ಠಾಕೂರ್', 'ಜೈ-ವೀರು' ಮತ್ತು 'ಬಸಂತಿ ಪಾತ್ರಗಳಂತೂ ಇವತ್ತಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಅವುಗಳಿಗೆ ಬಣ್ಣ ಹಚ್ಚಿದ  ಅಮ್ಜದ್ ಖಾನ್, ಸಂಜೀವ್  ಕುಮಾರ್ , ಅಮಿತಾಭ್ ಬಚ್ಚನ್, ಧರ್ಮೇಂದ್ರ ಮತ್ತು ಹೇಮಾಮಾಲಿನಿ ಸಿನಿಪ್ರಿಯರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡ್ರು.

ಹೌದು ಶೋಲೆ ಸಿನಿಮಾದ ರಾಮಗಢ ನಮ್ಮ ರಾಮನಗರ. ರಾಮನಗರ ಬೆಟ್ಟದಲ್ಲೇ ಶೋಲೆ ಚಿತ್ರೀಕರಣ ನಡೆದಿತ್ತು. ಈಗಲೂ ಇದನ್ನ ಶೋಲೆ ಬೆಟ್ಟ ಅಂತಲೇ ಕರೀತಾರೆ ಜನ.

ಶೋಲೆ ಸಿನಿಮಾ ಬೆಂಗಳೂರಿನಲ್ಲೂ 2 ವರ್ಷಗಳ ಕಾಲ ಪ್ರದರ್ಶನ ಕಂಡಿತ್ತು. ಆಗ ಎಲ್ಲಿ ನೋಡಿದ್ರೂ ಏ ದೋಸತಿ ಹಮ್ ನಹಿ ತೋಡೆಂಗೆ , ಮೆಹೆಬೂಬಾ ಓ ಮೆಹೆಬೂಬಾ ಹಾಡುಗಳೇ ಕೇಳಿ ಬರ್ತಾ ಇದ್ವು. ಕನ್ನಡ ಚಿತ್ರರಂಗದ ಅನೇಕ ತಾರೆಯರು ಕೂಡ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ರು. ಕನ್ನಡವೂ ಸೇರಿದಂತೆ ಶೋಲೆ ಸ್ಪೂರ್ತಿಯೊಂದಿಗೆ ಅನೇಕ ಭಾಷೆಯಲ್ಲಿ ಅನೇಕ ಸಿನಿಮಾಗಳು ತೆರೆಗೆ ಮೂಡಿಬಂದವು.

ಶೋಲೆ ಬಳಿಕ ಇಂಡಿಯನ್ ಸಿನಿಇಂಡಸ್ಟ್ರಿ ಇಂಥದ್ದೇ ಮಾಸ್ ಌಕ್ಷನ್ ಸಿನಿಮಾಗಳತ್ತ ಹೊರಳಿಕೊಂಡಿತು. ಅಮೀತಾಬ್ ಬಚ್ಚನ್ ಮುಂದೆ ಸೂಪರ್ ಸ್ಟಾರ್ ಆದ್ರು. ಎರಡು ವರ್ಷಗಳ ಹಿಂದೆ ಅಮೀತಾಬ್ ಶೋಲೆ ಸಿನಿಮಾದ ಅಂದಿನ ಟಿಕೆಟ್ ಹಂಚಿಕೊಂಡು ಹಳೆಯ ನೆನಪುಗಳನ್ನ ಹಂಚಿಕೊಂಡಿದ್ರು.

ಸದ್ಯ ಶೋಲೆ ಸಿನಿಮಾ ತೆರೆಕಂಡು 50 ವರ್ಷಗಳು ತುಂಬಿವೆ. ಈ ಸುವರ್ಣ ಸಂಭ್ರಮದಲ್ಲಿ ಈ ಚಿತ್ರವನ್ನ 4 ಕೆ ನಲ್ಲಿ ಮರು ಬಿಡುಗಡೆಮಾಡೋ ತಯಾರಿ ಕೂಡ ನಡೀತಾ ಇವೆ. ಸೆಪ್ಟೆಂಬರ್ 6ಕ್ಕೆ ಟೊರಾಂಟೋ ಫಿಲ್ಮ್ ಫೆಸ್ಟಿವಲ್​ನಲ್ಲಿ 4ಕೆ  ನಲ್ಲಿ ಶೋಲೆ ತೆರೆಕಾಣಲಿದೆ. ಭಾರತದಾದ್ಯಂತ ಚಿತ್ರಮಂದಿರಗಳಲ್ಲೂ  ಸದ್ಯದಲ್ಲೇ ರಿಲೀಸ್ ಆಗಲಿದೆ. ಮತ್ತೊಮ್ಮೆ 'ಗಬ್ಬರ್', 'ಠಾಕೂರ್', 'ಜೈ-ವೀರು' 'ಬಸಂತಿ ಬಿಗ್ ಸ್ಕ್ರೀನ್ ಮೇಲೆ ಬರಲಿದ್ದಾರೆ. 5 ದಶಕದ ಬಳಿಕವೂ ಮತ್ತೆ ನಿಮ್ಮನ್ನ ರಂಜಿಸಲಿದ್ದಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
Read more