
ಡಾಲಿ ಧನಂಜಯ್ - ಹೇಮಂತ್ ರಾವ್ ಕಾಂಬಿನೇಷನ್ನ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಟೈಟಲ್ ಲಾಂಚ್ ಇತ್ತೀಚೆಗಷ್ಟೇ ಆಗಿತ್ತು.. ಇದೀಗ ಸಿನಿಮಾದ ನಾಯಕ ಡಾಲಿ ಧನಂಜಯ್ ಲುಕ್ ರಿವೀಲ್ ಆಗಿದೆ.
ನಟ ಧನಂಜಯ ಅವರು ಕ್ಲೀನ್ ಶೇವ್ಡ್, ರೆಟ್ರೋ ಲುಕ್‌ನಲ್ಲಿ ಡಾಲಿ ಕಾಣಿಸಿಕೊಂಡಿದ್ದು, ಡಾಲಿಯ ಹೊಸ ಅವತಾರಕ್ಕೆ ಮೆಚ್ಚುಗೆಯ ಮಾತುಗಳು ಕೇಳಿ ಬರ್ತಿವೆ.. ಈ ಹಿಂದೆ ಹೆಡ್ ಬುಷ್ ಸಿನಿಮಾದಲ್ಲೂ ಡಾಲಿ ರೆಟ್ರೋ ಲುಕ್ನಲ್ಲಿ ಕಾಣಿಸಿಕೊಂಡಿದ್ರು.. ಇಷ್ಟರಲ್ಲೇ ಶಿವಣ್ಣನ ಲುಕ್ ಕೂಡ ರಿವೀಲ್ ಆಗಲಿದೆ.
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕೂಲಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಸಿನಿಮಾ ಬಿಡುಗಡೆಗೆ ಸಿದ್ಧತೆ ಜೋರಾಗಿ ನಡೀತಿದೆ.. ಇಲ್ಲಿ ತನಕ ಬಹುತೇಕ ತಾರಾಗಣದ ಲುಕ್ ರಿವೀಲ್ ಮಾಡಿದ್ದ ಚಿತ್ರತಂಡ..
ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಸನ್ ಆಫ್ ಮುತ್ತಣ್ಣ ಸಿನಿಮಾ ಬಿಡುಗಡೆ ದಿನಾಂಕ ಬದಲಾಗಿದೆ. ಸನ್ ಆಫ್ ಮುತ್ತಣ್ಣ ಸಿನಿಮಾ ಆಗಸ್ಟ್ 22ಕ್ಕೆ ತೆರೆಗೆ ಬರೋದಾಗಿ ಅನೌನ್ಸ್ ಮಾಡಿದೆ. ಈ ಸಿನಿಮಾಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಎರಡನೇ ಪುತ್ರ ಪ್ರಣವ್ ದೇವರಾಜ್ ನಾಯಕನಾಗಿ ನಟಿಸಿದ್ದು, ಸಚಿನ್ ಬಸ್ರೂರ್ ಸಂಗೀತ ನೀಡಿದ್ದಾರೆ.
ಸಿಗರೇಟ್ ಸೇದುವ ಚಟದಿಂದ ಏನೇನೆಲ್ಲ ಅನಾಹುತಗಳಾಗಬಹುದು ಎಂಬುದನ್ನು ಇಟ್ಟುಕೊಂಡು ಸ್ಟೋರಿ ಹೆಣೆದಿರೋ ಸಿನಿಮಾ ಸ್ಮೋಕ್ ಶಿವ. ಶಾರದಾ ಫಿಲಂಸ್ ಅಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಎಂ.ಶಿವ ಆಕ್ಷನ್ ಕಟ್ ಹೇಳುತ್ತಿದ್ದಾರೆ.