ಉತ್ತರ ಕನ್ನಡ: ಮಕ್ಕಳಿಂದಲೇ ಕೃಷಿ, ರಾಜ್ಯಕ್ಕೆ ಮಾದರಿಯಾಯ್ತು ಈ ಸರ್ಕಾರಿ ಶಾಲೆ!

ಉತ್ತರ ಕನ್ನಡ: ಮಕ್ಕಳಿಂದಲೇ ಕೃಷಿ, ರಾಜ್ಯಕ್ಕೆ ಮಾದರಿಯಾಯ್ತು ಈ ಸರ್ಕಾರಿ ಶಾಲೆ!

Published : Jun 13, 2022, 03:35 PM ISTUpdated : Jun 13, 2022, 03:48 PM IST

ಉತ್ತರಕನ್ನಡ ಜಿಲ್ಲೆಯ ಈ ಸರ್ಕಾರಿ ಶಾಲೆ ಮಾತ್ರ ಮಕ್ಕಳ ಮೂಲಕವೇ ಕೃಷಿ ಮಾಡಿಸುವ ಮೂಲಕ ಕಳೆದ 14 ವರ್ಷದಿಂದ ಮಕ್ಕಳಿಗೆ ಕೃಷಿ ಪಾಠ ಮಾಡುತ್ತಿದೆ. ಅಲ್ಲದೇ, ವಿದ್ಯಾರ್ಥಿಗಳನ್ನು ಮಣ್ಣಿನ ಮಕ್ಕಳನ್ನಾಗಿ ಶಾಲೆ ಬೆಳೆಸುತ್ತಿದೆ. 

ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಎಂತಹ ಪಠ್ಯ ನೀಡಬೇಕು ಅನ್ನೋ ಬಗ್ಗೆ ಪರ-ವಿರೋಧಗಳು ನಡೆಯುತ್ತಲೇ ಇದೆ. ಆದ್ರೆ, ಉತ್ತರಕನ್ನಡ ಜಿಲ್ಲೆಯ ಈ ಸರ್ಕಾರಿ ಶಾಲೆ ಮಾತ್ರ ಮಕ್ಕಳ ಮೂಲಕವೇ ಕೃಷಿ ಮಾಡಿಸುವ ಮೂಲಕ ಕಳೆದ 14 ವರ್ಷದಿಂದ ಮಕ್ಕಳಿಗೆ ಕೃಷಿ ಪಾಠ ಮಾಡುತ್ತಿದೆ. ಅಲ್ಲದೇ, ವಿದ್ಯಾರ್ಥಿಗಳನ್ನು ಮಣ್ಣಿನ ಮಕ್ಕಳನ್ನಾಗಿ ಶಾಲೆ ಬೆಳೆಸುತ್ತಿದೆ. 

ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಕುಂಬಾರವಾಡ ಗ್ರಾಮಪಂಚಾಯತ್ ವ್ಯಾಪ್ತಿಯ ಡೇರಿಯಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿ ಮೂಡಿಬಂದಿದೆ. ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ಈ ಶಾಲೆಗೆ ಒಂದನೇ ತರಗತಿಗೆ ಪ್ರವೇಶ ಪಡೆಯುವ ಹಾಗೂ ಐದನೇ ತರಗತಿ ಮುಗಿಸಿ ಹೋಗುವ ಯಾವುದೇ ಮಗುವಿರಲಿ ಮೊದಲು ಈ ಶಾಲೆಯಲ್ಲಿ ಯಾವುದಾದರೂ ಒಂದು ಗಿಡವನ್ನು ನೆಟ್ಟು ಪೋಷಣೆ ಮಾಡಬೇಕು.

ಈ ಶಾಲೆಯಲ್ಲಿ ಒಂದೂವರೆ ಎಕರೆ ಜಾಗ ಸಹ ಇರುವುದರಿಂದ 14 ವರ್ಷದಲ್ಲಿ ಈ ಶಾಲೆಗೆ ಬಂದು ಹೋದ ವಿದ್ಯಾರ್ಥಿಗಳು ನೆಟ್ಟ ಮಾವು, ಹಲಸು, ತೆಂಗಿನ ಮರಗಳು ಇಂದು ಫಲ ನೀಡುತ್ತಿದೆ. ಅಲ್ಲದೇ, ಇಲ್ಲಿ ಜೇನು ಸಾಕಾಣಿಕೆ, ಗೆಡ್ಡೆ ಗೆಣಸು, ತೋಟಗಾರಿಕಾ ಬೆಳೆಗಳನ್ನು ಕೂಡಾ ಬೆಳೆಯಲಾಗುತ್ತಿದ್ದು, ಮಕ್ಕಳೇ ಗಿಡವನ್ನು ನೆಟ್ಟು ಫಸಲು ನೀಡುವವರೆಗೆ ಪೋಷಣೆ ಮಾಡಿದ್ರೆ, ಶಿಕ್ಷಕರು ಹಾಗೂ ಪೋಷಕರು ಹೇಗೆ ಆರೈಕೆ ಮಾಡಬೇಕು ಎಂಬುದನ್ನು ತೋರಿಸಿಕೊಡುತ್ತಾರೆ. ಪ್ರತೀ ವರ್ಷ ಮಳೆಗಾಲದಲ್ಲಿ ಶಾಲೆಯ ಪಕ್ಕದಲ್ಲಿ ಇರುವ ಗದ್ದೆಯಲ್ಲಿ ಉಳಿಮೆ ಮಾಡುತ್ತಾರಲ್ಲದೇ, ಕಬ್ಬನ್ನು ಸಹ ಬೆಳೆದು ಬೆಲ್ಲ ಮಾಡುವ ಕೌಶಲ್ಯವನ್ನು ಇಲ್ಲಿನ ಮಕ್ಕಳಿಗೆ ಹೇಳಿಕೊಡಲಾಗುತ್ತಿದೆ. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲೇ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವಂತೆ ಮಾಡಲಾಗುತ್ತಿದೆ. 

ಕಳೆದ 14 ವರ್ಷದ ಹಿಂದೆ ಈ ಶಾಲೆಯಲ್ಲಿ ಶಿಕ್ಷಕರಾಗಿ ಆಗಮಿಸಿದ್ದ ಲೀಲಾದರ್ ಮೊಗೇರ್ ರವರು ಮಕ್ಕಳಿಗೆ ಕೃಷಿ ಬಗ್ಗೆ ಪಾಠ ಮಾಡುವ ಹಾಗೂ ಶಾಲೆಯಲ್ಲಿ ಮಕ್ಕಳಿಂದಲೇ ತೋಟ ನಿರ್ಮಿಸುವ ಕಾರ್ಯವನ್ನು ಮೊದಲು ಪ್ರಾರಂಭಿಸಿದ್ದರು. ಅವರು ವರ್ಗಾವಣೆಗೊಂಡು ಇದೀಗ ಮೂರು ವರ್ಷಗಳಾಗಿವೆ. ಇವರ ನಂತರ ಈ ಶಾಲೆಗೆ ಖಾಯಂ ಶಿಕ್ಷಕರಿಲ್ಲದೇ ಓರ್ವ ಅಥಿತಿ ಉಪನ್ಯಾಸಕರಿಂದ ಈ ಶಾಲೆ ನಡೆಯುತ್ತಿದೆ. ಆದರೂ, ಪೋಷಕರ ಸಹಕಾರದಿಂದ ಈಗಲೂ ಮಕ್ಕಳಿಗೆ ಕೃಷಿ ಪಾಠ ಮಾಡಲಾಗುತ್ತದೆ. ಇನ್ನು ಮಕ್ಕಳೇ ಬೆಳೆದ ಬೆಳೆಗಳನ್ನು ಇಲ್ಲಿನ ಬಿಸಿಯೂಟಕ್ಕೆ ಬಳಸಲಾಗುತ್ತದೆ. ಹಣ್ಣು ಹೆಚ್ಚು ಬೆಳೆ ಬಂದರೆ ಮಕ್ಕಳಿಗೆ ಹಂಚಿ ಉಳಿದುದನ್ನು ಮಾರಾಟ ಮಾಡಿ ಬಂದ ಹಣವನ್ನು ಮಕ್ಕಳಿಗಾಗಿ ಬಳಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಈ ಶಾಲೆಗೆ ಹಸಿರು ಶಾಲೆ ಎಂಬ ರಾಜ್ಯ ಪ್ರಶಸ್ತಿ ಕೂಡಾ ದೊರೆತಿದ್ದು, ಮಾದರಿ ಎನಿಸಿದೆ. 

03:16ಸುವರ್ಣನ್ಯೂಸ್​-ಕನ್ನಡಪ್ರಭ ಸಹಯೋಗದಲ್ಲಿ ಎಸ್​ಐಪಿ ಅಬಾಕಸ್ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧೆ
03:34ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಬೇಕಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಮಹಾರಾಷ್ಟ್ರದ ಪಾಲು!
04:07ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ: ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ!
19:34ಮುಖ್ಯಮಂತ್ರಿ ಕನ್ನಡ ಪಂಡಿತ.. ಮಂತ್ರಿಗಳಿಗೆ ಕನ್ನಡವೇ ಬರಲ್ವಾ..?
03:32ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕ ಸಹಯೋಗ
05:21Board Examination: 5,8,9ನೇ ತರಗತಿಯ ಪರೀಕ್ಷೆ ಅತಂತ್ರ : ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ!
04:36ಬ್ಯಾಡಗಿ: ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ ಹಳೆವಿದ್ಯಾರ್ಥಿಗಳು!
03:37ಬೆಂಗಳೂರು: ಬಿಬಿಎಂಪಿ ಶಾಲಾ ಕೊಠಡಿ ಈಗ ಪಂಕ್ಚರ್‌ ಶಾಪ್!
03:32ರಾಯಚೂರು: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಹಾಸ್ಟೆಲ್ ಕಟ್ಟಡ..!
02:31ನಿಮ್ಮ ಮಗ ಅಥವಾ ಮಗಳು ಯಾವತ್ತಾದರೂ IAS/IPS ಆಗೇಬೇಕೆಂದು ಹೇಳಿ ಕೊಂಡಿದ್ದಾರಾ?
Read more