UPSC ಎಕ್ಸಾಂ ಪಾಸ್ ಆದ ಬಳಿಕವೇ ಮದುವೆ ಅಂದ್ರಿದ್ರು ನನ್ನ ತಾಯಿ: ಟಾಪರ್ ಅರುಣಾ

UPSC ಎಕ್ಸಾಂ ಪಾಸ್ ಆದ ಬಳಿಕವೇ ಮದುವೆ ಅಂದ್ರಿದ್ರು ನನ್ನ ತಾಯಿ: ಟಾಪರ್ ಅರುಣಾ

Published : Jun 01, 2022, 01:56 PM IST

ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ 685 ಅಭ್ಯರ್ಥಿಗಳ ಪೈಕಿ ರಾಜ್ಯದ 32 ಅಭ್ಯರ್ಥಿಗಳು ಇದ್ದಾರೆ. ತುಮಕೂರಿನ ಶಿರಾ ತಾಲೂಕಿನ ಅರುಣಾ ಎಂ 308 ನೇ ರ್ಯಾಂಕ್ ಪಡೆದಿದ್ದಾರೆ. 

ಕೇಂದ್ರ ಲೋಕಸೇವಾ ಆಯೋಗ  (UPSC) ನಡೆಸಿದ 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ 685 ಅಭ್ಯರ್ಥಿಗಳ ಪೈಕಿ ರಾಜ್ಯದ 32 ಅಭ್ಯರ್ಥಿಗಳು ಇದ್ದಾರೆ. ತುಮಕೂರಿನ (Tumakuru)  ಶಿರಾ ತಾಲೂಕಿನ ಅರುಣಾ ಎಂ (Aruna M)  308 ನೇ ರ್ಯಾಂಕ್ ಪಡೆದಿದ್ದಾರೆ. 

'ಆರೇಳು ಬಾರಿ ಪರೀಕ್ಷೆ ಬರೆದಿದ್ದೆ. ಆದರೂ ಆಯ್ಕೆಯಾಗಲೇಬೇಕೆಂಬ ಛಲ ಬಿಡದೆ, ಹಟ ತೊಟ್ಟು ಕೊನೆಯ ಪ್ರಯತ್ನದಲ್ಲಿ ಆಯ್ಕೆಯಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಪರೀಕ್ಷೆಯ ಸಿಲೆಬಸ್‌ ತುಂಬಾ ಇರುತ್ತದೆ. ಹಾಗಾಗಿ ಸಂಪೂರ್ಣವಾದ ಬದ್ಧತೆಯೊಂದಿಗೆ, ಕಠಿಣ ಅಭ್ಯಾಸ ಮಾಡಬೇಕಾಗುತ್ತದೆ. ಮನೆಯವರಿಂದ ನೈತಿಕ ಮತ್ತು ಆರ್ಥಿಕ ಬೆಂಬಲ ಸಿಕ್ಕಿದ್ದರಿಂದಲೇ ಆಯ್ಕೆಯಾಗಿದ್ದೇನೆ. 3 ಬಾರಿ ನನ್ನ ಆರೋಗ್ಯ ಸಮಸ್ಯೆ ಇಂದಾಗಿ ಪರೀಕ್ಷೆ ಸರಿಯಾಗಿ ಬರಿಯೋಕೆ ಆಗಿಲ್ಲ. ಇಷ್ಟು ಬಾರಿ ನಾನು ಪರೀಕ್ಷೆ ಬರೆದ್ರೂ ಸಹ ನಾನು ಯಾವತ್ತೂ ಧೃತಿಗೆಡಲಿಲ್ಲ ಪಾಸ್ ಆಗಿಯೇ ಆಗ್ತೀನಿ, ಐಎಎಸ್ ಅಧಿಕಾರಿ ಆಗ್ತೀನಿ ಅನ್ನೋ ಛಲ ನನ್ನಲ್ಲಿತ್ತು. ನಾನು ಇಷ್ಟು ವರ್ಷ ಪಟ್ಟ ಶ್ರಮಕ್ಕೆ ಇಂದು ಸಾರ್ಥಕತೆ ಸಿಕ್ಕಿದೆ. ನಂಗೆ ಈಗ 32 ವರ್ಷ ವಯಸ್ಸು, ಆದ್ರೂ ಕೂಡ ನಮ್ಮ ಮನೇಲಿ ನನ್ನ ಮದುವೆ ವಿಷ್ಯ ಮಾತಾಡಿಲ್ಲ. ನಮ್ಮ ಮಗಳು upsc ಪಾಸ್ ಆಗ್ಲಿ ಆಮೇಲೆ ಮದುವೆ ಬಗ್ಗೆ ಯೋಚನೆ ಮಾಡೋಣ ಅಂತ ತಾಯಿ ಹೇಳ್ತಿದ್ರು. ಮನೆಯವರ ಸಪೋರ್ಟ್ ಬಹಳ ದೊಡ್ಡದು' ಎಂದು ಅರುಣಾ ಹೇಳಿದರು. 

 

03:16ಸುವರ್ಣನ್ಯೂಸ್​-ಕನ್ನಡಪ್ರಭ ಸಹಯೋಗದಲ್ಲಿ ಎಸ್​ಐಪಿ ಅಬಾಕಸ್ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧೆ
03:34ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಬೇಕಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಮಹಾರಾಷ್ಟ್ರದ ಪಾಲು!
04:07ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ: ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ!
19:34ಮುಖ್ಯಮಂತ್ರಿ ಕನ್ನಡ ಪಂಡಿತ.. ಮಂತ್ರಿಗಳಿಗೆ ಕನ್ನಡವೇ ಬರಲ್ವಾ..?
03:32ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕ ಸಹಯೋಗ
05:21Board Examination: 5,8,9ನೇ ತರಗತಿಯ ಪರೀಕ್ಷೆ ಅತಂತ್ರ : ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ!
04:36ಬ್ಯಾಡಗಿ: ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ ಹಳೆವಿದ್ಯಾರ್ಥಿಗಳು!
03:37ಬೆಂಗಳೂರು: ಬಿಬಿಎಂಪಿ ಶಾಲಾ ಕೊಠಡಿ ಈಗ ಪಂಕ್ಚರ್‌ ಶಾಪ್!
03:32ರಾಯಚೂರು: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಹಾಸ್ಟೆಲ್ ಕಟ್ಟಡ..!
02:31ನಿಮ್ಮ ಮಗ ಅಥವಾ ಮಗಳು ಯಾವತ್ತಾದರೂ IAS/IPS ಆಗೇಬೇಕೆಂದು ಹೇಳಿ ಕೊಂಡಿದ್ದಾರಾ?
Read more