Dec 3, 2020, 3:32 PM IST
ಬೆಂಗಳೂರು (ಡಿ. 03): ಕೋವಿಡ್ ಹಿನ್ನಲೆಯಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷಾ ರೂಪುರೇಷೆ ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜೂನ್ / ಜುಲೈನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಬಹು ಆಯ್ಕೆ ಪ್ರಶ್ನೆಗಳನ್ನು ಹೆಚ್ಚಿಸಲು, ದೀರ್ಘ ಉತ್ತರ ಬರೆಯುವ ಪ್ರಶ್ನೆಯನ್ನು ಕಡಿಮೆ ಮಾಡಲು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿಗೆ ತಜ್ಞರು ಸಲಹೆ ನೀಡಿದ್ದಾರೆ. ಇಷ್ಟೇ ಅಲ್ಲ, SSLC ಪಠ್ಯಕ್ರಮವನ್ನು ಶೇ. 30 ರಿಂದ 40 ರಷ್ಟು ಕಡಿತಗೊಳಿಸಲು ಸಲಹೆ ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ : ಬಿಜೆಪಿ ಶಾಸಕರು, ಸಚಿವರಿಗೆ ಕಟೀಲ್ ಎಚ್ಚರಿಕೆ..!
ಆನ್‌ಲೈನ್ ಕ್ಲಾಸ್‌ಗಳಿಂದ ಮಕ್ಕಳಿಗೆ ಸರಿಯಾಗಿ ಕಲಿಯಲಾಗುತ್ತಿಲ್ಲ. ಮಕ್ಕಳು ಸರಿಯಾಗಿ ಕಲಿಯದೇ ಪರೀಕ್ಷೆ ನಡೆಸುವುದು ಹೇಗೆ? ಪಾಸ್ ಮಾಡುವುದು ಹೇಗೆ? ಹಾಗಾಗಿ SSLC, PUC ಶೈಕ್ಷಣಿಕ ವರ್ಷವನ್ನು ವಿಸ್ತರಣೆ ಮಾಡುವುದು ಒಳ್ಳೆಯದು ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ.