NEET ಪರೀಕ್ಷೆಯಲ್ಲಿ ಪುತ್ತೂರಿನ ಸಿಂಚನಾ ಲಕ್ಷ್ಮೀ ಸಾಧನೆ, ರಾಘವೇಶ್ವರ ಶ್ರೀಗಳಿಂದ ಸನ್ಮಾನ

Nov 4, 2021, 10:08 AM IST

ಬೆಂಗಳೂರು (ನ. 04): ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ  (NEET) ಅಂಗವಿಕಲರ ವಿಭಾಗದಲ್ಲಿ ದೇಶದಲ್ಲಿ ಎರಡನೇ ಸ್ಥಾನ ಪಡೆದು ಉತ್ತೀರ್ಣರಾದ ಪುತ್ತೂರು (Putturu) ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ಸಿಂಚನಾ ಲಕ್ಷ್ಮಿಯನ್ನು (Sinchana Lakshmi) ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸನ್ಮಾನಿಸಿದರು.

NEET ಪರೀಕ್ಷೆಯಲ್ಲಿ ಪುತ್ತೂರು ವಿದ್ಯಾರ್ಥಿನಿ ದೇಸಕ್ಕೆ ದ್ವಿತೀಯ

ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಕಟ್ಟಡದ ಲೋಕಾರ್ಪಣೆಯ ಸಂದರ್ಭದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿದರು. ಈ ಸಂದರ್ಭ ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಸಂಸದ ನಳಿನ್‌ ಕುಮಾರ್‌ ಕಟೀಲ…, ಶಾಸಕ ಸಂಜೀವ ಮಠಂದೂರು, ಕಲ್ಲಡ್ಕ ಪ್ರಭಾಕರ ಭಟ್‌ ಇದ್ದರು. ಬೆನ್ನುಮೂಳೆಯ ಸಮಸ್ಯೆಯನ್ನು ಮೆಟ್ಟಿನಿಂತು ನೀಟ್‌ ಪರೀಕ್ಷೆಯಲ್ಲಿ ಸಿಂಚನಾಲಕ್ಷಿ 720ಕ್ಕೆ 658 ಅಂಕ ಪಡೆದು ಸಾಧನೆ ಮಾಡಿದ್ದಾರೆ.