Nov 28, 2021, 10:54 AM IST
ಗದಗ(ನ.28): ಮಳೆಯ ಕಾಟಕ್ಕೆ ವಿದ್ಯಾರ್ಥಿಗಳು ಸುಸ್ತಾಗಿದ್ದಾರೆ. ಹೌದು, ಶಾಲಾ ಛಾಬಣಿ ಕುಸಿಯುವ ಭೀತಿಯಿಂದಾಗಿ ಅಂಗಳದಲ್ಲೇ ಪಾಠ ಮಾಡುತ್ತಿರುವಂತ ಘಟನೆ ಗದಗ ನಗರದ ಎಸ್.ಎಂ. ಭೂಮರೆಡ್ಡಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಸ್ವಲ್ಪ ಯಾಮಾರಿದ್ರೂ ಈ ಶಾಲೆಯ ಮಕ್ಕಳ ಜೀವಕ್ಕೆ ಕುತ್ತು ಬರಲಿದೆ. ಬಿಸಿಲು, ಮಳೆ ಲೆಕ್ಕಿಸದೆ ಮಕ್ಕಳು ಅಂಗಳದಲ್ಲೇ ಪಾಠ ಕೇಳುತ್ತಿದ್ದಾರೆ. ಇದರ ಬಗ್ಗೆ ಮಾಹಿತಿ ಕೊಟ್ಟಿದ್ರೂ ಅಧಿಕಾರಿಗಳು ಮಾತ್ರ ಇತ್ತ ಕಡೆ ತಲೆಹಾಕಿ ನೋಡಿಲ್ಲ ಅನ್ನೋದು ಸ್ಥಳೀಯರ ಆರೋಪವಾಗಿದೆ.
Chamarajanagar: ಕೊಚ್ಚಿ ಹೋದ ಸೇತುವೆ, ಶಾಲಾ-ಮಕ್ಕಳ ಪರದಾಟ
ಇದರಿಂದಾಗಿ ಶಿಕ್ಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಮಕ್ಕಳನ್ನ ಶಾಲೆಯ ಒಳಗಡೆ ಬಿಡದೆ ಅಂಗಳದಲ್ಲೇ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಈ ಬಗ್ಗೆ ಮಕ್ಕಳು ಹಾಗೂ ಶಿಕ್ಷಕರು ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.