Feb 12, 2021, 2:49 PM IST
ಬೆಂಗಳೂರು (ಫೆ. 12): ಸರ್ಕಾರದ ಶುಲ್ಕ ಕಡಿತ ಆದೇಶಕ್ಕೆ ಕೆಲ ಖಾಸಗಿ ಶಾಲೆಗಳು ಡೋಂಟ್ ಕೇರ್ ಅಂದಿವೆ. ಇದರಿಂದ ಅಸಮಾಧಾನಗೊಂಡ ಪೋಷಕರು ಇಂದು ಮಹತ್ವದ ಮೀಟಿಂಗ್ ನಡೆಸಿದ್ದಾರೆ. ಸರ್ಕಾರದ ಆದೇಶ ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಫೀಸ್ ಕಡಿತದ ವಿಚಾರದ ದೂರು ಸ್ವೀಕಾರಕ್ಕೆ ಸರ್ಕಾರ ಸಮಿತಿ ರಚಿಸಬೇಕು. ಆದೇಶ ಪಾಲಿಸದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.