ವಿದ್ಯಾರ್ಥಿಗಳ ಕ್ಷೇಮವೇ ಸರ್ಕಾರದ ಮೊದಲ ಆದ್ಯತೆ. ಶಾಲಾ- ಕಾಲೇಜು ಆರಂಭದ ಬಗ್ಗೆ ಗೊಂದಲ ಬೇಡ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರು (ಜೂ.23): ವಿದ್ಯಾರ್ಥಿಗಳ ಕ್ಷೇಮವೇ ಸರ್ಕಾರದ ಮೊದಲ ಆದ್ಯತೆ. ಶಾಲಾ- ಕಾಲೇಜು ಆರಂಭದ ಬಗ್ಗೆ ಗೊಂದಲ ಬೇಡ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
'ತಾಂತ್ರಿಕ ಸಲಹಾ ಸಮಿತಿ, ಶಿಕ್ಷಣ ಸಚಿವರ ಜೊತೆ ಮಾತನಾಡುತ್ತೇನೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳೊಂದಿಗೆ ಕಾಲೇಜು ಆರಂಭಿಸುತ್ತೇವೆ. ಬಳಿಕ ಹೈಸ್ಕೂಲ್ ಆರಂಭಿಸುತ್ತೇವೆ' ಎಂದು ಡಾ. ಸುಧಾಕರ್ ಹೇಳಿದ್ಧಾರೆ.