ರಾಜ್ಯ ವಿಧಾನಸಭೆ ಕೊನೆ ದಿನದ ಕಲಾಪದಲ್ಲಿ ನಾಗ್ಪುರ vs ಇಟಲಿ ಫೈಟ್

Sep 24, 2021, 6:11 PM IST

ಬೆಂಗಳೂರು, (ಸೆ.24): ವಿಧಾನಸಭೆ ಅಧಿವೇಶ ಕೊನೆ ದಿನವಾದ ಇಂದು (ಸೆ.24) ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (National Education Policy) ಜಾರಿಗೆ ವಿರೋಧಿಸಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಹಾಗೂ ಇತರ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದರು.

NEP ಅಂದ್ರೆ ನಾಗಪುರ್ ಎಜುಕೇಷನ್ ಪಾಲಿಸಿ, ಅರ್ಥವೇ ಅಗಲ್ಲ ಬಿಡಿ.! ಡಿಕೆಶಿ

ಸರ್ಕಾರ ತರುತ್ತಿರುವ ಎನ್ ಇಪಿ ನಾಗ್ಪುರ ಶಿಕ್ಷಣ (Education) ನೀತಿ, ಇದು ಆರ್‌ಎಸ್‌ಎಸ್(RSS) ಅಜೆಂಡಾ ಇಟ್ಟುಕೊಂಡು ತರಲಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಆಗ ಡಿ ಕೆ ಶಿವಕುಮಾರ್ (DK SHivakumar) ಇದು ನ್ಯಾಷನಲ್ ಎಜುಕೇಶನ್ ಪಾಲಿಸಿ ಅಲ್ಲ. ಅದು ನಾಗಪುರ ಎಜುಕೇಶನ್ ಪಾಲಿಸಿ ಎಂದು ಏರುಧ್ವನಿಯಲ್ಲಿ ಟೀಕಿಸಿದ್ದು, ತೀವ್ರ ಗದ್ದಲ ಉಂಟಾಯಿತು.