ಇಲ್ಲದೇ ಇರುವ ಪಠ್ಯ ಬಿಡುವಂತೆ ಸರ್ಕಾರಕ್ಕೆ ಪತ್ರ, ಪೇಚಿಗೆ ಸಿಲುಕಿದ ಸಾಹಿತಿಗಳು..!

Jun 2, 2022, 10:56 AM IST

ಬೆಂಗಳೂರು (ಜೂ. 02): ಪಠ್ಯ ಪುಸ್ತಕ ಪರಿಷ್ಕರಣೆ (Revision Of Text Books) ವಿರುದ್ಧ ಸಾಹಿತಿಗಳು ಪಠ್ಯ ವಾಪಸಿ ಚಳುವಳಿ ನಡೆಸುತ್ತಿದ್ದಾರೆ. ಇಲ್ಲದೇ ಇರುವ ಪಠ್ಯ ಕೈ ಬಿಡುವಂತೆ ಪತ್ರ ಬರೆದು ಪೇಚಿಗೆ ಸಿಲುಕಿದ್ದಾರೆ ಸಾಹಿತಿಗಳು. ಪುಸ್ತಕದಲ್ಲಿ ತಮ್ಮ ಪಠ್ಯ ಇದೆಯಾ, ಇಲ್ವಾ ಎಂಬ ಖಚಿತತೆಯೇ ಇಲ್ಲದೇ ಸರ್ಕಾರಕ್ಕೆ ಪತ್ರ ಬರೆದು ಗೊಂದಲ ಸೃಷ್ಟಿಸಿದ್ದಾರೆ. ಬಿಜೆಪಿ ಟೂಲ್‌ಕಿಟ್ ಆರೋಪಕ್ಕೆ ಸಾಹಿತಿಗಳ ನಡೆ ಪುಷ್ಠಿ ನೀಡಿದೆ. ಪತ್ರ ಬರೆದ 11 ಜನರಲ್ಲಿ 4 ಸಾಹಿತಿಗಳ ಪಠ್ಯ ಮಾತ್ರ ಪುಸ್ತಕದಲ್ಲಿದೆ. 

News Hour: ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಬರಹ ವಾಪ್ಸಿ, 23 ಟ್ರಸ್ಟ್‌ಗಳಿಗೆ ನೀಡಿದ ಅನುದಾನ ಏನಾಯ್ತು..?