ರಾಯಚೂರಿನ ಯುವಕರ ತಂಡ, ಇಡೀ ಶಾಲೆಯನ್ನು ಕಲರ್ ಫುಲ್ ಮಾಡಿ ಹೋಳಿ ಆಚರಣೆ ಮಾಡುವ ಮುಖಾಂತರ ಎಲ್ಲರಿಗೂ ಮಾದರಿಯಾಗಿದ್ದಾರೆ.
ಬೆಂಗಳೂರು (ಏ. 06): ರಾಯಚೂರಿನ ಯುವಕರ ತಂಡ, ಇಡೀ ಶಾಲೆಯನ್ನು ಕಲರ್ ಫುಲ್ ಮಾಡಿ ಹೋಳಿ ಆಚರಣೆ ಮಾಡುವ ಮುಖಾಂತರ ಎಲ್ಲರಿಗೂ ಮಾದರಿಯಾಗಿದ್ದಾರೆ.
ನಗರದ ಜವಾಹರನಗರದ ಕಲ್ಲೂರು ಸರಾಫ್ ಶೀನಯ್ಯ ಬಾಲರಾಜ್ ಕನ್ನಡ ಮಾಧ್ಯಮ ಸರ್ಕಾರಿ ಅನುದಾನಿತ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಕಟ್ಟಡ ಬಣ್ಣವನ್ನ ಕಂಡು 15 ರಿಂದ 20 ವರ್ಷವೇ ಕಳೆದಿತ್ತು. ಶಾಲೆಯ ಕಟ್ಟಡ ಸಹ ಅಲ್ಲಲ್ಲಿ ಶಿಥಿಲಗೊಂಡಿತ್ತು. ಇದನ್ನ ಕಂಡ ಈ ಶಾಲೆಯ 1998 ರ ಬ್ಯಾಚ್‌ನ ಹಳೆಯ ವಿದ್ಯಾರ್ಥಿ ರಂಗಾರಾವ್ ದೇಸಾಯಿ ತನ್ನ ಸಹಪಾಠಿಗಳ ಸಹಾಯದಿಂದ ಶಾಲೆಗೆ ಹೊಸ ರೂಪವನ್ನೇ ಕೊಟ್ಟಿದ್ದಾರೆ. ಈ ಯುವಕರ ಕೆಲಸ ಮಾದರಿಯಾಗಿದೆ. ಈಗ ಶಾಲೆ ಹೇಗೆ ಬದಲಾಗಿದೆ..? ನೋಡೋಣ ಬನ್ನಿ..