ಶಾಲಾ- ಕಾಲೇಜು ಪುನಾರಂಭದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಬೆಂಗಳೂರಿನ ಖಾಸಗಿ ಶಾಲೆಯೊಂದು ಆದೇಶ ಉಲ್ಲಂಘನೆ ಮಾಡಿ ತರಗತಿಯನ್ನು ಆರಂಭಿಸಿದೆ.
ಬೆಂಗಳೂರು (ಅ. 01): ಶಾಲಾ- ಕಾಲೇಜು ಪುನಾರಂಭದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಬೆಂಗಳೂರಿನ ಖಾಸಗಿ ಶಾಲೆಯೊಂದು ಆದೇಶ ಉಲ್ಲಂಘನೆ ಮಾಡಿ ತರಗತಿಯನ್ನು ಆರಂಭಿಸಿದೆ.
ಕಸ್ತೂರಬಾ ನಗರದಲ್ಲಿರುವ ಅಯಿಷಾ ಇಂಗ್ಲೀಷ್ ಸ್ಕೂಲ್ 7,8, 9, ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಆರಂಭಿಸಿದೆ. ಅ. 15 ರವರೆಗೆ ಶಾಲೆ ತೆರೆಯಲು ಇನ್ನೂ ಸಮ್ಮತಿ ಸಿಕ್ಕಿಲ್ಲ. ಇವರು ಮಾತ್ರ ಸರ್ಕಾರದ ಆದೇಶಕ್ಕೆ ಬೆಲೆ ನೀಡದೇ ಶಾಲೆ ಆರಂಭಿಸಿದ್ದಾರೆ. ಮಕ್ಕಳ ಆರೋಗ್ಯಕ್ಕೆ ಇಲ್ಲಿ ಯಾರು ಹೊಣೆ? ಮಾನ್ಯ ಸುರೇಶ್ ಕುಮಾರ್ ಅವರೇ ದಯವಿಟ್ಟು ಗಮನಿಸಿ