Feb 17, 2022, 6:48 PM IST
ತುಮಕೂರು(ಫೆ.17): ಕರ್ನಾಟಕದ ಮೂಲೆ ಮೂಲೆಯಲ್ಲಿ ಹಿಜಾಬ್ (Hijab) ಕಿಚ್ಚು ಹೆಚ್ಚುತ್ತಿದೆ. ಒಂದೆಡೆ ಕೋರ್ಟ್ ನಲ್ಲಿ ಈ ಬಗ್ಗೆ ವಾದ ಮಂಡನೆ ನಡೆಯುತ್ತಿದೆ. ಮತ್ತೊಂಡೆದೆ. ಅಲ್ಲಲ್ಲಿ ಪ್ರತಿಭಟನೆಗಳು ಮುಂದುವರೆದಿದೆ. ತುಮಕೂರಿನಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದು, ನಮಗೆ ನ್ಯಾಯ ಬೇಕು ಅಂತ ಕೂಗಿ ವಿದ್ಯಾರ್ಥಿನಿಯರು ತುಮಕೂರು (Tumakuru) ಡಿಸಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
Hijab Row : ಈಶ್ವರಪ್ಪ ವಜಾಕ್ಕೆ ಡೆಡ್ ಲೈನ್ ನೀಡಿದ ಸಿದ್ದರಾಮಯ್ಯ.. ಇಲ್ಲಾ ಅಹೋರಾತ್ರಿ ಧರಣಿ
ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ರಸ್ತೆಯಲ್ಲೇ ನಿಂತು ಪ್ರತಿಭಟನೆ ನಡೆಸಿದ್ದು, ಇದೇ ವೇಳೆ ಪೋಲಿಸರು ಮತ್ತು ವಿದ್ಯಾರ್ಥಿಗಳ ಮಧ್ಯೆ ವಾಗ್ವಾದ ನಡೆದಿದೆ. ಇನ್ನು ಜಿಲ್ಲಾವಾರು ಪ್ರತಿಭಟನೆ ನಡೆಯುತ್ತಿದ್ದು ಹಿಜಾಬ್ ವಿವಾದ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಈ ನಡುವೆ ಗುರುವಾರ ವಕೀಲರ ವಾದ ಆಲಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ (karnataka high court ) ವಿಚಾರಣೆಯನ್ನು ನಾಳೆ ಅಂದರೆ ಫೆ.18ಕ್ಕೆ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ. ಫೆ.18ರಂದು ರಾಜ್ಯ ಸರ್ಕಾರದ ಪರ ವಾದಮಂಡನೆ ನಡೆಯಲಿದೆ.