Sep 29, 2020, 12:15 PM IST
ಬೆಂಗಳೂರು (ಸೆ. 29): ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ಶುರುವಾಗಿದೆ. ಶಾಲಾ- ಕಾಲೇಜುಗಳನ್ನು ಆರಂಭಿಸಿ ಬಿಡೋಣ ಎನ್ನುವ ಮನೋಭಾವದಲ್ಲಿದೆ ಸರ್ಕಾರ. ಆದರೆ ಇದಕ್ಕೆ ಸಾರ್ವಜನಿಕ ವಲಯದಲ್ಲಿ, ಪೋಷಕರ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಕೊರೊನಾ ಭೀತಿಯಿಂದ ವಿಧಾನ ಮಂಡಲ ಕಲಾಪವನ್ನೇ ಮೊಟಕುಗೊಳಿಸುವ ಸರ್ಕಾರ, ಶಾಸಕರು, ಸಂಸದರ ಬಗ್ಗೆ ಕಾಳಜಿ ತೆಗೆದುಕೊಳ್ಳುವ ಸರ್ಕಾರ ಈಗ ಮಕ್ಕಳ ಬಗ್ಗೆ ಯಾಕೆ ನಿರ್ಲಕ್ಷ್ಯ ವಹಿಸುತ್ತಿದೆ? ಯಾಕೆ ಜವಾಬ್ದಾರಿಯನ್ನು ಮರೆಯುತ್ತಿದೆ? ಪೋಷಕರು ಏನಂತಾರೆ? ಎಂಬುದರ ಬಗ್ಗೆ ಸುವರ್ಣ ನ್ಯೂಸ್- ಕನ್ನಡ ಪ್ರಭ ಅಭಿಯಾನ ನಡೆಸುತ್ತಿದೆ. ಪೋಷಕರು ಮಾತನಾಡಿದ್ದಾರೆ. ಏನಂತಾರೆ ನೋಡಿ..