‘ಸುವರ್ಣ ಎಜುಕೇಶನ್ ಎಕ್ಸ್‌ಪೋ'ಗೆ ಭರ್ಜರಿ ಸ್ಪಂದನೆ, ತಜ್ಞರಿಂದ ವಿದ್ಯಾರ್ಥಿಗಳಿಗೆ ಮಾಹಿತಿ

Sep 26, 2021, 3:58 PM IST

ಬೆಂಗಳೂರು (ಸೆ. 26): ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಹಭಾಗಿತ್ವದಲ್ಲಿ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ ಆಟದ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಸುವರ್ಣ ಶಿಕ್ಷಣ’ ಮೆಗಾ ಎಜುಕೇಷನ್‌ ಎಕ್ಸ್‌ಪೋಗೆ ಉತ್ತಮ ಸ್ಪಂದನೆ ಸಿಕ್ಕಿದೆ. 

ಸುವರ್ಣ ನ್ಯೂಸ್ - ಕನ್ನಡ ಪ್ರಭ ಎಜುಕೇಷನ್ ಎಕ್ಸ್‌ಪೋಗೆ ಗಣೇಶ್ ಚಾಲನೆ

ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಸಿಇಟಿ ಪಾಸ್‌ ಆಗಿರುವ ವಿದ್ಯಾರ್ಥಿಗಳು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸ್ಟಾಲ್‌ಗಳಿಗೆ ಭೇಟಿ ನೀಡಿ ಭವಿಷ್ಯದ ವ್ಯಾಸಂಗಕ್ಕೆ ತಮ್ಮ ಮುಂದಿರುವ ಬಹು ಅವಕಾಶಗಳ ಬಗ್ಗೆ ಮಾಹಿತಿ ಪಡೆದರು. ಯಾವ್ಯಾವ ಶಿಕ್ಷಣ ಸಂಸ್ಥೆಗಳಲ್ಲಿ ಯಾವ್ಯಾವ ಕೋರ್ಸುಗಳಿವೆ, ಯಾವ್ಯಾವ ಕೋರ್ಸುಗಳನ್ನು ಅಧ್ಯಯನ ಮಾಡಿದರೆ ಉತ್ತಮ ಭವಿಷ್ಯ, ಉತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ ಎಂಬ ಬಗ್ಗೆ ತಜ್ಞರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.