Students Tested Positive corona: ರಾಜ್ಯದ ವಿದ್ಯಾರ್ಥಿಗಳಿಗೆ ಕೊರೊನಾ, 5 ಜಿಲ್ಲೆಯಲ್ಲಿ ಶಾಲೆ ಬಂದ್!

Jan 15, 2022, 1:46 PM IST

ಬೆಂಗಳೂರು(ಜ.15):ರಾಜ್ಯಾದ್ಯಂತ  ಶಾಲಾ ಕಾಲೇಜುಗಳಲ್ಲಿ  ಭಾರಿ ಸಂಖ್ಯೆಯಲ್ಲಿ ಕೊರೋನಾ  ಪತ್ತೆಯಾಗುತ್ತಿದ್ದು ಶುಕ್ರವಾರ ಒಂದೇ ದಿನ 850ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಸೋಂಕು ದೃಢಪಟ್ಟಿದೆ.  ಈ ಮೂಲಕ ಕಳೆದ 10 ದಿನಗಳಲ್ಲಿ ಸೋಂಕಿಗೆ ತುತ್ತಾದವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 2319ಕ್ಕೇರಿದೆ. ಹಾಸನ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ತಲಾ 139 ಪಾಸಿಟಿವ್‌ ವರದಿಗಳು ಬಂದಿವೆ. ಅವಿಭಜಿತ ಬಳ್ಳಾರಿ(ಬಳ್ಳಾರಿ+ವಿಜಯನಗರ) ಜಿಲ್ಲೆಯಲ್ಲಿ ಒಟ್ಟಾರೆ 197 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಬುಧವಾರ ಒಂದೇ ದಿನದಲ್ಲಿ 298 ವಿದ್ಯಾರ್ಥಿಗಳಿಗೆ ಪಾಸಿಟಿವ್‌ ಬಂದಿದ್ದರೆ, ಗುರುವಾರ ಈ ಸಂಖ್ಯೆ 392ಕ್ಕೇರಿದೆ. ಆದರೆ ಶುಕ್ರವಾರ ಈ ಸಂಖ್ಯೆ ದ್ವಿಗುಣಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಶಾಲೆಗಳಲ್ಲಿ ಕೊರೋನಾ ಸ್ಫೋಟ: ಒಂದೇ ದಿನ 850 ಕೇಸ್‌

ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಪತ್ತೆಯಾದ 497 ಮಂದಿ ಕೋವಿಡ್‌ ಸೋಂಕಿತರಲ್ಲಿ 139 ಮಂದಿ ಜಿಲ್ಲೆಯ ವಿವಿಧ ಶಾಲೆ ಕಾಲೇಜು ಮತ್ತು ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್‌(Covid19) ಅಲೆಯಲ್ಲಿ ಒಟ್ಟು 1432 ವಿದ್ಯಾರ್ಥಿಗಳಿಗೆ ಸೋಂಕು ಪತ್ತೆಯಾದಂತಾಗಿದೆ. ಇನ್ನು ಹಾಸನ ಜಿಲ್ಲೆಯೊಂದರಲ್ಲೇ ಶುಕ್ರವಾರ 139 ವಿದ್ಯಾರ್ಥಿಗಳು ಮತ್ತು 59 ಶಿಕ್ಷಕರಲ್ಲಿ(Teachers) ಕೊರೋನಾ ದೃಢಪಟ್ಟಿದೆ. ಹೀಗಾಗಿ ಬೆಳಗಾವಿ, ಬೆಂಗಳೂರು, ಧಾರವಾಡ, ಮಂಡ್ಯ ಮತ್ತು ಮೈಸೂರು ಜಿಲ್ಲೆಯಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ.