ರಾಜ್ಯದಲ್ಲಿ ಕೊರೋನಾ ಸೋಂಕು (Covid 19) ಹೆಚ್ಚಾಗುತ್ತಿದೆ. ಓಮಿಕ್ರಾನ್ ಭೀತಿಯೂ ಹೆಚ್ಚಾಗಿದೆ. ಶಾಲಾ-ಕಾಲೇಜುಗಳನ್ನು ಆರಂಭಿಸಲಾಗಿದೆ. ಮಕ್ಕಳ ಮೇಲೆ ಪರಿಣಾಮ ಬೀರಬಹುದಾ ಎಂಬ ಆತಂಕ ಶುರುವಾಗಿದೆ.
ಬೆಂಗಳೂರು (ಡಿ. 06): ರಾಜ್ಯದಲ್ಲಿ ಕೊರೋನಾ ಸೋಂಕು (Covid 19) ಹೆಚ್ಚಾಗುತ್ತಿದೆ. ಓಮಿಕ್ರಾನ್ ಭೀತಿಯೂ ಹೆಚ್ಚಾಗಿದೆ. ಶಾಲಾ-ಕಾಲೇಜುಗಳನ್ನು ಆರಂಭಿಸಲಾಗಿದೆ. ಮಕ್ಕಳ ಮೇಲೆ ಪರಿಣಾಮ ಬೀರಬಹುದಾ ಎಂಬ ಆತಂಕ ಶುರುವಾಗಿದೆ.
'ಮಕ್ಕಳ ಮೇಲೆ ಒಮಿಕ್ರಾನ್ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ಶಾಲೆಗಳನ್ನು ಬಂದ್ ಮಾಡುವ ಸ್ಥಿತಿ ಬಂದರೂ ನಾವು ಸಿದ್ದರಿದ್ದೇವೆ. ಕೆಲವು ರೆಸಿಡೆನ್ಷಿಯಲ್ ಶಾಲೆಗಳಲ್ಲಿ ಸೋಂಕು ಪತ್ತೆಯಾಗಿದೆ. ಬೇರೆ ಶಾಲೆಗಳಲ್ಲಿ ಸೋಂಕು ಇಲ್ಲ. ಜಿಲ್ಲಾಧಿಕಾರಿಗಳು, ಸಿಇಒಗಳ ಜೊತೆ ಮಾತನಾಡಿದ್ದೇನೆ' ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.