'ಬೆಂಗಳೂರಿನಲ್ಲಿ (Bengaluru) ಪಾಸಿಟಿವಿಟಿ ದರ (Positivity Rate) ಜಾಸ್ತಿ ಇರುವುದರಿಂದ ಜ. 29 ರಿಂದ ಶಾಲೆಗಳಿಗೆ ರಜೆ ನೀಡಲಾಗಿದೆ. ಉಳಿದೆಡೆ ಶಾಲೆಗಳು ಎಂದಿನಂತೆ ನಡೆಯಲಿವೆ. ಪಾಸಿಟಿವಿಟಿ ದರ ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ' ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಬೆಂಗಳೂರು (ಜ. 21): ರಾಜ್ಯದಲ್ಲಿ ಜನಾಕ್ರೋಶಕ್ಕೆ ಮಣಿದು ಸರ್ಕಾರ ವೀಕೆಂಡ್ ಕರ್ಫ್ಯೂವನ್ನು (Weekend Curfew) ವಾಪಸ್ ಪಡೆದಿದೆ. ಇಂದು ಸಂಜೆಯಿಂದ ವೀಕೆಂಡ್ ಕರ್ಫ್ಯೂ ಆಗಬೇಕಿತ್ತು, ಆದರೆ ಇಂದು ನಡೆದ ಹೈವೋಲ್ಟೇಜ್ ಸಭೆಯಲ್ಲಿ ಕರ್ಫ್ಯೂ ತೆರವಿಗೆ ನಿರ್ಣಯ ತೆಗೆದುಕೊಂಡಿದ್ದಾರೆ.
'ಬೆಂಗಳೂರಿನಲ್ಲಿ (Bengaluru) ಪಾಸಿಟಿವಿಟಿ ದರ (Positivity Rate) ಜಾಸ್ತಿ ಇರುವುದರಿಂದ ಜ. 29 ರಿಂದ ಶಾಲೆಗಳಿಗೆ ರಜೆ ನೀಡಲಾಗಿದೆ. ಉಳಿದೆಡೆ ಶಾಲೆಗಳು ಎಂದಿನಂತೆ ನಡೆಯಲಿವೆ. ಪಾಸಿಟಿವಿಟಿ ದರ ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ' ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
'ಈಗ ಆಸ್ಪತ್ರೆ ಸೇರುವವರ ಸಂಖ್ಯೆ ಶೇ. 5 ರಷ್ಟಿದೆ. ಇದು ಹೆಚ್ಚಾದರೆ ಮತ್ತೆ ಟಫ್‌ರೂಲ್ಸ್ ತರಬೇಕಾಗುತ್ತದೆ. ತಜ್ಞರು, ಅಧಿಕಾರಿಗಳ ವರದಿ ಆಧರಿಸಿ ವೀಕೆಂಡ್ ಕರ್ಫ್ಯೂ ತೆರವುಗೊಳಿಸಿದ್ದೇವೆ. ನೈಟ್ ಕರ್ಫ್ಯೂ ಮುಂದುವರೆಯುತ್ತದೆ. ಶೇ. 50:50 ರೂಲ್ಸ್ ಯಥಾಸ್ಥಿತಿಯಲ್ಲಿರಲಿದೆ. ಪ್ರತಿಭಟನೆ, ರ್ಯಾಲಿ, ಸಭೆ ಸಮಾರಂಭಗಳಿಗೆ ನಿರ್ಬಂಧಗಳಿವೆ' ಎಂದು ಸಭೆ ಬಳಿಕ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.