'ಹೊಸ ವೈರಸ್ ಬಗ್ಗೆ ಅಪಾಯ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಶಾಲೆ ಆರಂಭಿಸಬಹುದು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಪೋಷಕರು ಹೆದರುವ ಅಗತ್ಯ ಇಲ್ಲ. ಜನವರಿ 1 ರಿಂದ ನಿಗದಿಯಂತೆ ಶಾಲಾ ಕಾಲೇಜು ಆರಂಭವಾಗುವುದು' ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಡಿ. 30): 'ಹೊಸ ವೈರಸ್ ಬಗ್ಗೆ ಅಪಾಯ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಶಾಲೆ ಆರಂಭಿಸಬಹುದು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಪೋಷಕರು ಹೆದರುವ ಅಗತ್ಯ ಇಲ್ಲ. ಜನವರಿ 1 ರಿಂದ ನಿಗದಿಯಂತೆ ಶಾಲಾ ಕಾಲೇಜು ಆರಂಭವಾಗುವುದು' ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
'ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದೇವೆ. ಪ್ರತಿ ಶಾಲೆಗೂ ಮಾರ್ಗಸೂಚಿಗಳನ್ನು ಕಳುಹಿಸಲಾಗಿದೆ. ಮಕ್ಕಳ ಸುರಕ್ಷತೆಯ ಬಗ್ಗೆ ನಮಗೂ ಕಾಳಜಿಯಿದೆ' ಎಂದಿದ್ಧಾರೆ.