ಶಾಲೆಗೆ ಹೊಸ ಟಚ್, ಕೊಠಡಿಯಾಯ್ತು ಸೈನ್ಸ್ ರೂಂ, ಮಲ್ಟಿ ಟ್ಯಾಲೆಂಟೆಡ್ ವಿಜ್ಞಾನ ಶಿಕ್ಷಕನ ಕಮಾಲ್!

ಶಾಲೆಗೆ ಹೊಸ ಟಚ್, ಕೊಠಡಿಯಾಯ್ತು ಸೈನ್ಸ್ ರೂಂ, ಮಲ್ಟಿ ಟ್ಯಾಲೆಂಟೆಡ್ ವಿಜ್ಞಾನ ಶಿಕ್ಷಕನ ಕಮಾಲ್!

Suvarna News   | Asianet News
Published : Nov 10, 2021, 03:31 PM IST

- ಕುಮಾರಸ್ವಾಮಿ- ಇವರು ಸಾಮಾನ್ಯ ಶಿಕ್ಷಕ ಅಲ್ಲ, ಮಲ್ಟಿ ಟ್ಯಾಲೆಂಟೆಡ್ ಟೀಚರ್!

- ಕೋವಿಡ್ ಲಾಕ್‍ಡೌನ್ ರಜಾ ಅವಧಿಯಲ್ಲಿ ಶಾಲಾ ಕಟ್ಟಡವನ್ನು ಅಂದಗಾಣಿಸಿರುವ ಶಿಕ್ಷಕ

- ವಿಜ್ಞಾನ ಶಿಕ್ಷಕರಾಗಿರೋದ್ರಿಂದ ಸದಾ ಹೊಸ ಪ್ರಯೋಗ ಮಾಡುವ ಕುಮಾರಸ್ವಾಮಿ 

 ಕೊಡಗು (ನ. 10): ಮಡಿಕೇರಿ ತಾಲೂಕಿನ ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ (Science Teacher) ಕುಮಾರಸ್ವಾಮಿ ಸದಾ ಹೊಸ ಪ್ರಯೋಗ ಮಾಡುತ್ತಿರುತ್ತಾರೆ. ಮಕ್ಕಳಿಗೆ ಏನೇ ಪಾಠ ಮಾಡಿದ್ರೂ, ಅದನ್ನು ಪ್ರಯೋಗದ ರೂಪದಲ್ಲಿ ವಿವರಿಸ್ಬೇಕು ಅನ್ನೋದು ಇವರ ಹಠ.  ಗ್ರಾಮೀಣ ಪ್ರದೇಶದಲ್ಲಿ ಜನ ಮೆಚ್ಚುವ, ವಿದ್ಯಾರ್ಥಿಗಳು ಇಷ್ಟಪಡುವ ಕಾರ್ಯ ಮಾಡಿ ಗಮನಸೆಳೆಯುತ್ತಿದ್ದಾರೆ. 

ಕೊರೊನಾ ಲಾಕ್ಡೌನ್  (Lockdown) ಸಮಯದಲ್ಲಿ ಸಿಕ್ಕ ರಜಾ ಅವಧಿಯಲ್ಲಿ ಶಾಲೆಯ ಅಂದ ಹೆಚ್ಚಿಸುವುದಕ್ಕೆ ಗೋಡೆಗಳ ಮೇಲೆ ಕಲರ್‌ಫುಲ್ ಆಗಿ ಚಿತ್ರ ಬಿಡಿಸಿದ್ದಾರೆ.  ಸರ್ಕಾರದಿಂದ ಒಂದಷ್ಟು ಅನುದಾನ ಬಳಸಿಕೊಂಡಿದ್ದು ಬಿಟ್ಟರೆ, ಉಳಿದದ್ದೆಲ್ಲ ಇವರ ಸ್ವಂತ ಖರ್ಚಿನಲ್ಲೇ ಮಾಡಿಸಿದ್ದಾರೆ.  ಈ ಶಾಲೆ ಮಾತ್ರವಲ್ಲ, ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಶಾಲೆಗಳಿಗೆ ಟ್ರೈನ್, ವಿಮಾನ, ಹೆಲಿಕಾಪ್ಟರ್ ಹೀಗೆ ಬೇರೆ ಬೇರೆ ಅತ್ಯಾಕರ್ಷಕ ಬಣ್ಣಗಳ ಮೂಲಕ ಹೊಸ ಟಚ್ ನೀಡಿದ್ದಾರೆ.

 

03:16ಸುವರ್ಣನ್ಯೂಸ್​-ಕನ್ನಡಪ್ರಭ ಸಹಯೋಗದಲ್ಲಿ ಎಸ್​ಐಪಿ ಅಬಾಕಸ್ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧೆ
03:34ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಬೇಕಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಮಹಾರಾಷ್ಟ್ರದ ಪಾಲು!
04:07ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ: ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ!
19:34ಮುಖ್ಯಮಂತ್ರಿ ಕನ್ನಡ ಪಂಡಿತ.. ಮಂತ್ರಿಗಳಿಗೆ ಕನ್ನಡವೇ ಬರಲ್ವಾ..?
03:32ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕ ಸಹಯೋಗ
05:21Board Examination: 5,8,9ನೇ ತರಗತಿಯ ಪರೀಕ್ಷೆ ಅತಂತ್ರ : ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ!
04:36ಬ್ಯಾಡಗಿ: ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ ಹಳೆವಿದ್ಯಾರ್ಥಿಗಳು!
03:37ಬೆಂಗಳೂರು: ಬಿಬಿಎಂಪಿ ಶಾಲಾ ಕೊಠಡಿ ಈಗ ಪಂಕ್ಚರ್‌ ಶಾಪ್!
03:32ರಾಯಚೂರು: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಹಾಸ್ಟೆಲ್ ಕಟ್ಟಡ..!
02:31ನಿಮ್ಮ ಮಗ ಅಥವಾ ಮಗಳು ಯಾವತ್ತಾದರೂ IAS/IPS ಆಗೇಬೇಕೆಂದು ಹೇಳಿ ಕೊಂಡಿದ್ದಾರಾ?
Read more