Jun 2, 2022, 12:01 AM IST
ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಹಂಪಾ ನಾಗರಾಜ್ ಕುವೆಂಪು ಪ್ರತಿಷ್ಠಾನಕ್ಕೆ ರಾಜೀನಾಮೆ, ಅವರ ಪತ್ನಿ ಸಮಿತಿಯಲ್ಲಿ ಮುಂದುವರಿದ್ದಾರೆ. 23 ಟ್ರಸ್ಟ್‌ಗಳಿಗೆ ಸರ್ಕಾರ ಹಣ ನೀಡುತ್ತಿದೆ.ಈ ಹಣ ಎಲ್ಲಿಗೆ ಹೋಯಿತು. ತನಿಖೆ ನಡೆಯಲಿ ಎಂದು ಚಕ್ರವರ್ತಿ ಸುಲಿಬೆಲೆ ಪ್ರಶ್ನಿಸಿದ್ದಾರೆ.ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಎನ್ಎಸ್‌ಯುಐ ಶಿಕ್ಷಣ ಸಚಿವರ ಮನೆಗೆ ನುಗ್ಗಿ ಪ್ರತಿಭಟನೆ ನಡೆದಿದ್ದಾರೆ. ಖಾಖಿ ಚಡ್ಡಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪರ್ಮಿಶನ್ ವಾಪ್ಸಿ, ಬರಹ ವಾಪ್ಸಿ, ರಾಜೀನಾಮೆ ಪರ್ವ ಸೇರಿದಂತೆ ಹಲವು ಅಂದೋಲನಗಳು ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ನಡೆಯುತ್ತಿದೆ. ಇದಕ್ಕೆ ರೋಹಿತ್ ಚಕ್ರತೀರ್ಥ ಉತ್ತರಿಸಿದ್ದಾರೆ.