Hijab Verdict: ಕೋರ್ಟ್ ಆದೇಶದ ಬಳಿಕವೂ ಉಡುಪಿಯ 6 ವಿದ್ಯಾರ್ಥಿನಿಯರು ಕಾಲೇಜಿಗೆ ಗೈರು

Mar 16, 2022, 1:26 PM IST

ಬೆಂಗಳೂರು (ಮಾ. 16):  ದೇಶಾದ್ಯಂತ ತೀವ್ರ ಚರ್ಚೆ ಹುಟ್ಟುಹಾಕಿದ್ದ ಹಿಜಾಬ್‌ ಪ್ರಕರಣ ಕುರಿತ ಹೈಕೋರ್ಟ್‌ ಆದೇಶ ಹೊರಬಿದ್ದಿದ್ದು, ಶಾಲಾ ಕಾಲೇಜಿನ ತರಗತಿಗಳಿಗೆ ಹಿಜಾಬ್‌ ಧರಿಸಿ ಹಾಜರಾಗುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ 2022 ಫೆ.5ರಂದು ಹೊರಡಿಸಿದ್ದ ಆದೇಶವನ್ನು ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ.

Hijab Verdict: ಸುಪ್ರೀಂ ಅಂಗಳಕ್ಕೆ ಹಿಜಾಬ್, ಹೋರಾಟ ಮುಂದುವರೆಸುತ್ತೇವೆ: ಹಿಜಾಬ್ ಪರ ವಕೀಲ

ಹಿಜಾಬ್ ಇಲ್ಲದೇ ಕಾಲೇಜಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯರು, ಹೈಕೋರ್ಟ್ ಆದೇಶದ ಬಳಿಕವೂ ಕಾಲೇಜಿಗೆ ಗೈರಾಗಿದ್ದಾರೆ. ರಾಜ್ಯಾದ್ಯಂತ ಶಾಲೆ-ಕಾಲೇಜು ಎಂದಿನಂತೆ ಶುರುವಾಗಿದೆ. ಉಡುಪಿ, ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಉಡುಪಿಯಲ್ಲಿ 6 ವಿದ್ಯಾರ್ಥಿನಿಯರು ಗೈರಾಗಿದ್ದಾರೆ.