Jun 23, 2021, 5:58 PM IST
ಬೆಂಗಳೂರು (ಜೂ. 23): ರಾಜ್ಯದಲ್ಲಿ ಆದಷ್ಟುಬೇಗ ಶಾಲಾ-ಕಾಲೇಜುಗಳನ್ನು ಆರಂಭಿಸಲು ಕ್ರಮ ಕೈಗೊಳ್ಳುವಂತೆ ಹೆಸರಾಂತ ವೈದ್ಯ ಡಾ.ದೇವಿಶೆಟ್ಟಿ ನೇತೃತ್ವದ ಉನ್ನತ ಮಟ್ಟದ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಶಾಲಾ-ಕಾಲೇಜು ಪ್ರಾರಂಭಿಸುವುದನ್ನು ತಡ ಮಾಡಿದರೆ ಮಕ್ಕಳಲ್ಲಿ ಅಪೌಷ್ಟಿಕತೆ, ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಭಿಕ್ಷಾಟನೆಯಂತಹ ಪಿಡುಗುಗಳು ಹೆಚ್ಚುತ್ತವೆ. ಇದು ಕೋವಿಡ್ 19ನಿಂದಾಗುವ ಪರಿಣಾಮಗಳಿಗಿಂತ ಕೆಟ್ಟದಾಗಿರುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.
ಸಿಎಂ ಜೊತೆ ಡಾ. ದೇವಿಶೆಟ್ಟಿ ತಂಡದ ಸಭೆ ಮುಕ್ತಾಯ; ಶಾಲೆ ಆರಂಭಕ್ಕೆ ಶಿಫಾರಸ್ಸುಗಳು
ಕೋವಿಡ್ 3ನೇ ಅಲೆ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿಯು ಹಲವು ಶಿಫಾರುಸುಗಳನ್ನೊಳಗೊಂಡ ಒಟ್ಟು 92 ಪುಟಗಳ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲ್ಲಿಸಿದೆ. ಇದರಲ್ಲಿ ಬಹುಮುಖ್ಯವಾಗಿ ಶಾಲೆ, ಕಾಲೇಜು ಆರಂಭದ ಬಗ್ಗೆ ಸುದೀರ್ಘ ಶಿಫಾರಸುಗಳನ್ನು ನೀಡಿದೆ.