ಹಿಜಾಬ್ ವಿವಾದದ (Hijab Row) ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೂ (ಪಿಯು) ಫೆ.15ರವರೆಗೆ ರಜೆ ವಿಸ್ತರಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಹೈಸ್ಕೂಲ್ ಆರಂಭಿಸಿದರೂ ಕಾಲೇಜು ಆರಂಭ ವಿಳಂಬ ಯಾಕೆ ಎಂಬ ಪ್ರಶ್ನೆ ಎದ್ದಿದೆ.
ಬೆಂಗಳೂರು (ಫೆ. 13): ಹಿಜಾಬ್ ವಿವಾದದ (Hijab Row) ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೂ (ಪಿಯು) ಫೆ.15ರವರೆಗೆ ರಜೆ ವಿಸ್ತರಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಹೈಸ್ಕೂಲ್ ಆರಂಭಿಸಿದರೂ ಕಾಲೇಜು ಆರಂಭ ವಿಳಂಬ ಯಾಕೆ ಎಂಬ ಪ್ರಶ್ನೆ ಎದ್ದಿದೆ.
ಹೈಸ್ಕೂಲ್ ಕಾಲೇಜ್ ಕ್ಯಾಂಪಸ್ ಬಹಳ ಭಿನ್ನವಾದದ್ದು. ಕಾಲೇಜುಗಳಲ್ಲಿ ಕೋಮು ಸಂಘರ್ಷ ಸೃಷ್ಟಿಯಾಗುವ ಆತಂಕವಿದೆ. ಕಾಲೇಜುಗಳಿಂದ ಬೇರೆಡೆಯೂ ಹಬ್ಬಿ ರಾಜ್ಯಾದ್ಯಂತ ಗಲಭೆಯಾದ್ರೆ ನಿಯಂತ್ರಿಸೋದು ಬಹಳ ಕಷ್ಟ. ಅಧಿವೇಶನದ ವೇಳೆ ವಿವಾದ ವಿಪಕ್ಷಗಳಿಗೆ ಅಸ್ತ್ರವಾಗುತ್ತದೆ' ಎಂಬುದು ಸರ್ಕಾರದ ಲೆಕ್ಕಾಚಾರ.