ಕಲ್ಬುರ್ಗಿ ವಠಾರ ಶಾಲೆಯ ರೂವಾರಿ ದಿಢೀರನೇ ಎತ್ತಂಗಡಿ; ಕಾರಣ ಮಾತ್ರ ಅಚ್ಚರಿ!

Oct 10, 2020, 12:59 PM IST

ಬೆಂಗಳೂರು (ಅ. 10): ವಿದ್ಯಾಗಮ ಯೋಜನೆ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬರುತ್ತಿದೆ. ಈ ಯೋಜನೆಯಿಂದ ಶಿಕ್ಷಕರಿಗೆ, ಮಕ್ಕಳಿಗೆ ಕಂಟಕವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತಿವೆ. 

ಕಲಬುರ್ಗಿಗೆ ವಠಾರ ಶಾಲೆ ಪರಿಚಯಿಸಿದ್ದ ರೂವಾರಿ ನಳಿನ್ ಅತುಲ್ ದಿಢೀರನೇ ಎತ್ತಂಗಡಿಯಾಗಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಡೆಪ್ಯೂಟಿ ಸೆಕ್ರೆಟರಿ ಆಗಿ ವರ್ಗವಾಗಿದ್ದಾರೆ.  ಇವರ ದಿಢೀರ್ ಎತ್ತಂಗಡಿ ಸಂಚಲನ ಮೂಡಿಸಿದೆ. 

ಅಪಾಯ ತರುತ್ತಿದೆ ವಿದ್ಯಾಗಮ; 30 ವಿದ್ಯಾರ್ಥಿಗಳಿಗೆ ಪಾಸಿಟೀವ್, ಹೆಚ್ಚಾಗುತ್ತಿದೆ ಆತಂಕ

ಕೊರೊನಾ ಲಾಕ್‌ಡೌನ್ ವೇಳೆ ರಾಜ್ಯದಲ್ಲಿ ಶಾಲೆಗಳು ಬಂದ್ ಆಗಿದ್ದವು.  ಕಲಬುರ್ಗಿಯಲ್ಲಿ ವಠಾರ ಶಾಲೆ ಆರಂಭಿಸಲು ನಳಿನ್ ಅತುಲ್ ಆದೇಶಿಸಿದ್ದರು. ಇದೀಗ ಇವರನ್ನೇ ಎತ್ತಂಗಡಿ ಮಾಡಲಾಗಿದೆ.