ತಾನು ಕಲಿತ ಕಾಲೇಜಿಗೆ ಕಾರ್ಮಿಕ ಆಯುಕ್ತ ಅಕ್ರಂ ಪಾಷಾ ಭರ್ಜರಿ ಗಿಫ್ಟ್‌

Feb 9, 2022, 8:11 PM IST

ತುಮಕೂರು(ಫೆ.9): ತುಮಕೂರು (Tumakuru) ಜಿಲ್ಲೆಯ ಮಧುಗಿರಿ ಸರ್ಕಾರಿ  ಕಾಲೇಜಿಗೆ ಕಾರ್ಮಿಕ ಆಯುಕ್ತ ಅಕ್ರಂ ಪಾಷಾ (Akram Pasha) ಗಿಫ್ಟ್‌ ನೀಡಿದ್ದಾರೆ. ತಾವು ಕಲಿತ ಮಧುಗಿರಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಲ್ಯಾಬ್  ಕ್ರೀಡಾ ಸಾಮಗ್ರಿ ಹಾಗೂ ಎಸ್.ಎಸ್.ಎಲ್.ಸಿ ಕನ್ನಡ ಮತ್ತು ಆಂಗ್ಲ ವಿದ್ಯಾರ್ಥಿಗಳಿಗೆ  ಟ್ಯಾಬ್ ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಮಕ್ಕಳ ಭವಿಷ್ಯದ ಶಿಕ್ಷಣಕ್ಕೆ ಬೆಂಬಲ ನೀಡಿದ್ದಾರೆ.

ವಿದ್ಯಾರ್ಥಿನಿಯರು ಯಾರದ್ದೋ ಪ್ರಚೋದನೆಗೆ ಒಳಗಾಗಿದ್ದಾರೆ. ಶಿಕ್ಷಣ ಸಚಿವ ಆರೋಪ

ಮಾತ್ರವಲ್ಲ ತಾವು ಕಲಿತ ವಿದ್ಯಾ ದೇಗುಲದ ಮೇಲೆ ಕಾರ್ಮಿಕ ಆಯುಕ್ತ ಅಕ್ರಂ ಪಾಷಾ ಅದೆಷ್ಟು ಪ್ರೀತಿ ಗೌರವವಿದೆ ಎಂಬುದು ಇದರಿಂದ ತಿಳಿದಿದೆ. ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಲ್ಯಾಬ್, ಕ್ರೀಡಾ ಸಾಮಗ್ರಿ ಮಾತ್ರವಲ್ಲದೆ ಎಸ್.ಎಸ್.ಎಲ್.ಸಿ ಕನ್ನಡ ಮತ್ತು ಆಂಗ್ಲ ವಿದ್ಯಾರ್ಥಿಗಳಿಗೆ  ಟ್ಯಾಬ್ ನೀಡುವಾಗ ತುಮಕೂರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್‌ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು.