Bhagavad Gita: ರಾಜ್ಯದಲ್ಲೂ ಭಗವದ್ಗೀತೆ ಪಠ್ಯ ಅಳವಡಿಕೆ ಸಾಧ್ಯತೆ.?

Mar 18, 2022, 2:56 PM IST

ಬೆಂಗಳೂರು (ಮಾ. 18):  2022-23 ನೇ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಅಳವಡಿಸಲಾಗುವುದು ಎಂದು ಗುಜರಾತ್‌ ಸರ್ಕಾರ ವಿಧಾನಸಭೆಯಲ್ಲಿ ಘೋಷಿಸಿದೆ. ಪಠ್ಯದಲ್ಲಿ ಭಗವದ್ಗೀತೆ ವಿಚಾರ ರಾಜ್ಯದಲ್ಲೂ ಚರ್ಚೆಯಾಗುತ್ತಿದೆ. ರಾಜ್ಯದಲ್ಲೂ ಪಠ್ಯದಲ್ಲಿ ಅಳವಡಿಕೆಯಾಗುವ ಸಾಧ್ಯತೆ ಇದೆ. 

‘ಭಗವದ್ಗೀತೆಯಲ್ಲಿ ಪ್ರತಿಪಾದಿಸಲಾದ ಮೌಲ್ಯಗಳು ಮತ್ತು ತತ್ವಗಳನ್ನು ಶಾಲಾ ಪಠ್ಯಕ್ರಮದಲ್ಲಿ ಪರಿಚಯಿಸುವ ನಿರ್ಧಾರವು ಕೇಂದ್ರವು ಅನಾವರಣಗೊಳಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿದೆ. ಭಗವದ್ಗೀತೆಯು ಭಾರತದ ಶ್ರೀಮಂತ ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳು ಹಾಗೂ ಜ್ಞಾನ ವ್ಯವಸ್ಥೆಗಳ ಪರಿಚಯವನ್ನು ಮಾಡಿಕೊಡುತ್ತದೆ' ಎಂದು ಗುಜರಾತ್ ಸಮರ್ಥಿಸಿಕೊಂಡಿದೆ.