ಕೊಡಗು: ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ತೆರೆದು ಮಾದರಿಯಾದ ಶಿಕ್ಷಕ

ಕೊಡಗು: ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ತೆರೆದು ಮಾದರಿಯಾದ ಶಿಕ್ಷಕ

Published : Jun 25, 2022, 03:19 PM ISTUpdated : Jun 25, 2022, 03:43 PM IST

ಕುಗ್ರಾಮದಲ್ಲೊಂದು ಎಸ್‌ಬಿಎಂ ಬ್ಯಾಂಕ್ ಓಪನ್ ಆಗಿದೆ. ಅಲ್ಲಿ ಅಕೌಂಟ್ ಹೊಂದಿರೋದ್ಯಾರು..? ಕರ್ತವ್ಯ ನಿರ್ವಹಿಸೋದ್ಯಾರು..? ಅವರ ವಿದ್ಯಾರ್ಹತೆ ಏನು ಅಂತ ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರ. ಒಂದೇ ಒಂದೂ ಕಂಪ್ಯೂಟರ್ ಇಲ್ಲದೆ ಅಲ್ಲಿ ಬ್ಯಾಂಕ್ ವ್ಯವಹಾರ ನಡೀತಿದೆ.‌ 

ಪುಟ್ಟ ಪುಟ್ಟ ಚೇರ್‌ನಲ್ಲಿ ದೊಡ್ಡ ಜವಬ್ದಾರಿ ಹೊತ್ತು ಕುಳಿತಿರೋ ಪುಟ್ಟ ಮಕ್ಕಳು, ಅಲ್ಲೇ ಲೈನಾಗಿ ನಿಂತಿರೋ ವಿದ್ಯಾರ್ಥಿಗಳು. ಕೈಯಲ್ಲಿ ಪಾಸ್ ಬುಕ್ ಜೊತೆಗೆ ಹಣ. ಅಲ್ಲೇ ಪಕ್ಕದಲ್ಲೇ ಬ್ಯಾಂಕ್ ಲಾಕರ್.. ಅಕೌಂಟ್ ನಂಬರ್ ನೋಡಿ ಹಣ ಜಮೆ ಮಾಡಿಸಿಕೊಳ್ತಿರುವ ಪುಟಾಣಿಗಳು..‌ ಇಂಟರೆಸ್ಟಿಂಗ್ ಇದೆ ಅಲ್ವಾ..? ಇದ್ಯಾವುದೋ ಬ್ಯಾಂಕ್ ಪ್ರಾತ್ಯಕ್ಷಿಕೆ ಇರಬೇಕು ಅಂದುಕೊಂಡ್ರಾ..! ಅಲ್ವೇ ಅಲ್ಲಾ.. ಇದು ನಿತ್ಯವೂ ನಿಜವಾಗಿಯೂ ಕಾರ್ಯನಿರ್ವಹಿಸುತ್ತಿರೋ ಎಸ್‌ಬಿಎಂ ಬ್ಯಾಂಕ್.. ಎಸ್‌ಬಿಎಂ ಅಂದ್ರೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಲ್ಲ.. ಇದು ಸ್ಕೂಲ್ ಬ್ಯಾಂಕ್ ಆಫ್ ಮುಳ್ಳೂರು..! 

ಇವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸತೀಶ್ ಈ ಬ್ಯಾಂಕ್‌ನ ಸ್ಥಾಪಕರು.. ಒಂದರಿಂದ ಐದನೇ ತರಗತಿವರೆಗಿನ ಮಕ್ಕಳಿರುವ ಈ ಕುಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ತೆರೆದು ಇಡೀ ರಾಜ್ಯವೇ ಹುಬ್ಬೇರುವಂತೆ ಮಾಡಿದ ಮಾದರಿ ಶಿಕ್ಷಕ.

ಪುಟ್ಟ ಮಕ್ಕಳಲ್ಲಿ ಬ್ಯಾಂಕ್ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಲು ಮತ್ತು ಮಕ್ಕಳಿಗೆ ಉಳಿತಾಯದ ಮನಸ್ಥಿತಿ ಕಲಿಸಲು ಹೀಗೆ ಸರ್ಕಾರಿ ಶಾಲೆಯಲ್ಲಿ ಬ್ಯಾಂಕ್ ತೆರೆಯಲಾಗಿದೆ. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 37 ವಿದ್ಯಾರ್ಥಿಗಳಿಗೂ ಒಂದೊಂದು ಲಾಕರ್ ಒಳಗೊಂಡಂತೆ ಒಂದು ಖಜಾನೆಯನ್ನು ಸಿದ್ಧಪಡಿಸಲಾಗಿದೆ.

ವಿದ್ಯಾರ್ಥಿಗಳು ತಮ್ಮ ತಮ್ಮ ಲಾಕರ್ ಗಳಲ್ಲಿ ತಾವು ವಾರದ ದಿನಗಳಲ್ಲಿ ಉಳಿಸಿರುವ ಚಿಲ್ಲರೆ ಹಣಗಳನ್ನು ತಂದು ಹಾಕುತ್ತಾರೆ ಶಿಕ್ಷಕರು ಅದನ್ನು ವಿದ್ಯಾರ್ಥಿಗಳಿಗೆ ನೀಡಿರುವ ಪಾಸ್ ಬುಕ್ ಗಳಲ್ಲಿ ನಮೂದಿಸುವುದರ ಜೊತೆಗೆ ಖಜಾನೆಯಲ್ಲಿ ಇಟ್ಟಿರುವ ಲೆಡ್ಜರ್ ನಲ್ಲಿ ಕೂಡ ಬರೆದುಕೊಳ್ಳುತ್ತಾರೆ. ಇನ್ನು ಜಾಸ್ತಿ ದುಡ್ಡು ಉಳಿಸೋ ಮಕ್ಕಳಿಗೆ ಬಹುಮಾನದ ಜೊತೆಗೆ ಬಡ್ಡಿ ಕೂಡ ಸಿಗುತ್ತದಂತೆ

ಇದು ಮಕ್ಕಳು ತಿಂಡಿ, ಜಂಕ್ ಫುಡ್ ತಿಂದು ವೇಸ್ಟ್ ಮಾಡುವ ಹಣವನ್ನ‌ ಶಾಲೆಯಲ್ಲಿ ಉಳಿಕೆ ಮಾಡ್ರಿರೋದು ಪೋಷಕರಿಗೂ ಖುಷಿ ಕೊಟ್ಟಿದೆ. ಇಂತಹ ವಿನೂತನ ಬ್ಯಾಂಕ್ ಸ್ಥಾಪಿಸಿದ ಶಿಕ್ಷಕರಿಗೆ ವಿದ್ಯಾರ್ಥಿಗಳ ಪೋಷಕರು, ಊರ ಜನರು ಶ್ಲಾಘನೆ ಕೂಡ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯೋರಿಗೆ, ಅದ್ರಲ್ಲೂ ಕುಗ್ರಾಮಗಳ‌ ಶಾಲೆ ಅಂದ್ರೆ ಅಸಡ್ಡೆ ತೋರೋರನ್ನ ನಾಚಿಸುವಂತಿದೆ ಈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳ್ಳೂರು ಹಾಗೂ ಮುಳ್ಳೂರಿಗೆ ಸ್ಕೂಲ್ ಬ್ಯಾಂಕ್. ಇಂತಹ ವಿಭಿನ್ನ ಪ್ರಯತ್ನ ಮಾಡಿರುವ ಈ ಶಾಲೆಯ ಶಿಕ್ಷಕ ಸತೀಶ್‌ರಿಗೊಂದು ಸಲಾಂ.

03:16ಸುವರ್ಣನ್ಯೂಸ್​-ಕನ್ನಡಪ್ರಭ ಸಹಯೋಗದಲ್ಲಿ ಎಸ್​ಐಪಿ ಅಬಾಕಸ್ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧೆ
03:34ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಬೇಕಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಮಹಾರಾಷ್ಟ್ರದ ಪಾಲು!
04:07ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ: ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ!
19:34ಮುಖ್ಯಮಂತ್ರಿ ಕನ್ನಡ ಪಂಡಿತ.. ಮಂತ್ರಿಗಳಿಗೆ ಕನ್ನಡವೇ ಬರಲ್ವಾ..?
03:32ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕ ಸಹಯೋಗ
05:21Board Examination: 5,8,9ನೇ ತರಗತಿಯ ಪರೀಕ್ಷೆ ಅತಂತ್ರ : ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ!
04:36ಬ್ಯಾಡಗಿ: ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ ಹಳೆವಿದ್ಯಾರ್ಥಿಗಳು!
03:37ಬೆಂಗಳೂರು: ಬಿಬಿಎಂಪಿ ಶಾಲಾ ಕೊಠಡಿ ಈಗ ಪಂಕ್ಚರ್‌ ಶಾಪ್!
03:32ರಾಯಚೂರು: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಹಾಸ್ಟೆಲ್ ಕಟ್ಟಡ..!
02:31ನಿಮ್ಮ ಮಗ ಅಥವಾ ಮಗಳು ಯಾವತ್ತಾದರೂ IAS/IPS ಆಗೇಬೇಕೆಂದು ಹೇಳಿ ಕೊಂಡಿದ್ದಾರಾ?
Read more