ಚಿಕ್ಕಮಗಳೂರು: ಮಕ್ಕಳ ಕೊರತೆಯಿಂದ ಬಾಗಿಲು ಮುಚ್ಚಿವೆ 3 ಸರ್ಕಾರಿ ಶಾಲೆಗಳು

Nov 3, 2021, 11:32 AM IST

ಚಿಕ್ಕಮಗಳೂರು (ನ. 03): ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದಬೇಕು ಎಂಬ ಪೋಷಕರ ಆಸೆ, ಆಂಗ್ಲ ಮಾಧ್ಯಮ ಶಾಲೆಗಳಿಗೆ ಪೈಪೋಟಿ ನೀಡಲು ಸಾಧ್ಯವಾಗದ ಕಾರಣವೋ ಏನೋ, ಚಿಕ್ಕಮಗಳೂರು (Chikkamagaluru) ಜಿಲ್ಲೆಯೊಂದರಲ್ಲೇ 2014 ರಿಂದ 87 ಶಾಲೆಗಳು ಬಂದ್ ಆಗಿವೆ.

ಸರ್ಕಾರಿ ಶಾಲೆಗೆ ಕಲಾ ಸ್ಪರ್ಶ, ಹೈಟೆಕ್ ಲುಕ್, ಒಳ ಹೋದರೆ ರಾಜ್ಯ ಸುತ್ತಿದ ಅನುಭವ..!

ಈ ವರ್ಷ 3 ಸರ್ಕಾರಿ ಶಾಲೆಗಳು (Govt Schools) ಬಂದ್ ಆಗಿವೆ. ಇದರ ನಡುವೆ ಆಶಾದಾಯಕ ಎನ್ನುವಂತೆ ಮುಚ್ಚಿದ 80 ಶಾಲೆಗಳಲ್ಲಿ 7 ಶಾಲೆಗಳು ಓಪನ್ ಆಗಿವೆ. ಕೋವಿಡ್ 19 ನಿಂದ ಆರ್ಥಿಕ ಸ್ಥಿತಿಗತಿ ಹದಗೆಟ್ಟಿರುವುದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಬಹುತೇಕ ಕಡೆ ಸರ್ಕಾರಿ ಶಾಲೆಗಳ ಸ್ಥಿತಿ ಹೀಗೇ ಆಗಿದೆ.