Dec 8, 2021, 10:11 AM IST
ಬೆಂಗಳೂರು (ಡಿ. 08): ಕೋವಿಡ್ (Covid 19) ಸಂದರ್ಭದಲ್ಲಿ ಶಿಕ್ಷಕರು (Teachers) ಅವಿರತವಾಗಿ ಕೆಲಸ ಮಾಡಿದ್ದರು. ಬೇಸಿಗೆ ರಜೆ, ದಸರಾ ಸಮಯದಲ್ಲೂ ರಜೆ ಪಡೆಯದೇ ಕೆಲಸ ಮಾಡಿದ್ದರು. ಅವರಿಗೆ ಗಳಿಕೆ ರಜೆ ಪಡೆಯುವ ಅರ್ಹತೆ ಇದ್ದರೂ, ಮೇಲಧಿಕಾರಿಗಳು ಅವಕಾಶ ನೀಡಿರಲಿಲ್ಲ.
Omicron Threat: ಶಾಲೆ ಬಂದ್ ಮಾಡುವ ಪರಿಸ್ಥಿತಿ ಬಂದ್ರೆ ಸರ್ಕಾರ ಸಿದ್ಧ, ಆತಂಕ ಬೇಡ: ಬಿ ಸಿ ನಾಗೇಶ್
ರಜೆ ನೀಡಿ (Leave) ಎಂದು ಶಿಕ್ಷಕರೂ ಮನವಿ ಮಾಡಿದರೂ, ರಜೆ ನೀಡದೇ ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಶಿಕ್ಷಣ ಸಚಿವ ಬಿ ಸಿ ನಾಗೇಶ್, (BC Nagesh) ಕೊರೋನಾ ವೇಳೆ ಕರ್ತವ್ಯಕ್ಕೆ ಬಂದಿದ್ದ ಶಿಕ್ಷಕರಿಗೆ ಗಳಿಕೆ ರಜೆ (Paid Leaves) ನೀಡಿ ಎಂದು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.