Jan 30, 2022, 1:23 PM IST
ಬೆಂಗಳೂರು(ಜ.30): ಸಂತೋಷ್ ಲಾಡ್ ಫೌಂಡೇಶನ್ (Santosh Lad Foundation) ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 3 ತಿಂಗಳ ಉಚಿತ ಆನ್‌ಲೈನ್ ಕ್ಲಾಸ್‌ಗಳನ್ನು ಆಯೋಜಿಸಲಾಗಿದೆ. ಈ ತರಗತಿಗಳು ಫೆಬ್ರವರಿ 2 ರಿಂದ ಆರಂಭವಾಗಲಿವೆ. ಈ ಕ್ಲಾಸ್ ಗಳನ್ನು ಪಡೆಯಲು https://linktr.ee/SantoshSLadINC ಲಿಂಕ್ ಕ್ಲಿಕ್ ಮಾಡಿ. ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಕೆಎಎಸ್,ಐಎಎಸ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯ ಬಗ್ಗೆ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳ 3 ತಿಂಗಳ ತರಭೇತಿ ವೆಚ್ಚವನ್ನು ಸಂತೋಷ್ ಲಾಡ್ ಫೌಂಡೇಶನ್ ಭರಿಸಲಿದೆ.