Jun 22, 2021, 3:35 PM IST
ಬೆಂಗಳೂರು (ಜೂ. 22): ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ ಇಳಿಮುಖವಾಗಿದೆ ಎಂದು ಏಕಾಏಕಿ ರಾಜ್ಯಾದ್ಯಂತ ಶಾಲೆಗಳನ್ನು ಪುನರಾರಂಭ ಮಾಡಬಾರದು. ಬದಲಿಗೆ, ಶಿಕ್ಷಕರು, ಪೋಷಕರಿಗೆ ಗರಿಷ್ಠ ಸಂಖ್ಯೆಯಲ್ಲಿ ಲಸಿಕೆ ಹಾಕಿಸಬೇಕು. ಬಳಿಕ ಆಯಾ ಪ್ರದೇಶದಲ್ಲಿನ ಸುರಕ್ಷತೆ ಆಧರಿಸಿ ‘ವಿಕೇಂದ್ರೀಕರಣ ವ್ಯವಸ್ಥೆ’ ಅಡಿ ಶಾಲೆಗಳ ಆರಂಭಕ್ಕೆ ಸ್ಥಳೀಯವಾಗಿ ನಿರ್ಧಾರ ಮಾಡಬಹುದು ಎಂದು ಡಾ.ದೇವಿಶೆಟ್ಟಿ ನೇತೃತ್ವದಲ್ಲಿ 3ನೇ ಅಲೆ ಸಿದ್ಧತೆ ಕುರಿತು ರಚಿಸಿರುವ ಉನ್ನತ ಮಟ್ಟದ ತಜ್ಞರ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ತಿಳಿಸಿದೆ.
ವರದಿ ಸಲ್ಲಿಕೆ ಬೆನ್ನಲ್ಲೇ ಶಾಲಾ ಪ್ರಾರಂಭದ ಬಗ್ಗೆ ಸಿಎಂ ಮಹತ್ವದ ಪ್ರತಿಕ್ರಿಯೆ
ಈ ಬಗ್ಗೆ ಇಂದು ಸಿಎಂ ಜೊತೆ ಸಭೆ ನಡೆಸಲಾಗಿದೆ. ಶಾಲೆ ಆರಂಭದ ಬಗ್ಗೆ ಕೆಲವು ಶಿಫಾರಸ್ಸುಗಳನ್ನು ಮಾಡಿದ್ದಾರೆ. ಏನದು ಶಿಫಾರಸ್ಸುಗಳು..? ಇಲ್ಲಿದೆ ನೋಡಿ.