Jun 16, 2022, 3:41 PM IST
ಚಿತ್ರದುರ್ಗ (ಜೂ. 16): ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ (Holalkere) ತಾಲೂಕು ಪಾಪೇನಹಳ್ಳಿ ಸರ್ಕಾರಿ ಶಾಲೆ 40 ವರ್ಷಗಳಷ್ಟು ಹಳೆಯದಾಗಿದ್ದು ಲಗಾಡೆ ಎದ್ದು ಹೋಗಿದೆ. ಮಕ್ಕಳಿಗೆ ಹೊರಗಡೆ ಮರದ ಕೆಳಗೆ ಪಾಠ ಮಾಡಲಾಗುತ್ತಿದೆ. ಕಟ್ಟಡ ಸರಿಪಡಿಸುವಂತೆ ಸ್ಥಳೀಯ ಶಾಸಕ ಚಂದ್ರಪ್ಪ ಅವರ ಗಮನಕ್ಕೂ ತರಲಾಗಿದೆ. ಅವರು ಹೊಸ ಕಟ್ಟಡಕ್ಕೆ ಅನುಮೋದನೆ ಕೊಟ್ಟಿದ್ದಾರೆ. ಅದರೆ ಗುತ್ತಿಗೆದಾರ ಮಾತ್ರ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾನೆ. 2 ವರ್ಷಗಳಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಶಾಸಕರನ್ನು ಕೇಳಿದರೆ ಮಾಡ್ತೀವಿ, ಮಾಡ್ತೀವಿ ಅಂತಾರೆ, ಗುತ್ತಿಗೆದಾರನನ್ನು ಕೇಳಿದರೆ ಬಿಲ್ ಆಗಿಲ್ಲ, ನಾನೇನ್ ಮಾಡಲಿ ಅಂತಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡುತ್ತಿದ್ದಾರೆ. ಕಟ್ಟಡ ಕಾಮಗಾರಿ ಮುಗಿಯುವುದು ಯಾವಾಗ..? ಎಂದು ಸ್ಥಳೀಯರು, ಪೋಷಕರು ಪ್ರಶ್ನಿಸುತ್ತಿದ್ದಾರೆ.
BIG 3 Hero: 14 ಸಾವಿರಕ್ಕೂ ಹೆಚ್ಚು ಬೇವಿನ ಮರ ಬೆಳೆಸಿದ ತುಮಕೂರಿನ ವೃಕ್ಷಪ್ರೇಮಿ ಸಿದ್ಧಪ್ಪ!