ಪಶು ವಿವಿ 12ನೇ ಘಟಿಕೋತ್ಸವ: ರೈತನ ಮಗನ ಚಿನ್ನದ ಫಸಲು, ಸೈನಿಕನ ಮಗಳ ಬಂಗಾರದ ಬೇಟೆ

May 1, 2022, 11:04 AM IST

ಬೀದರ್ (ಮೇ. 01):  ಕನಸು ನನಸಾದ ಸಿಹಿಯಾದ ಕ್ಷಣ, ಸಾಧಕರ ಕಣ್ಣಲ್ಲಿ ಸಾರ್ಥಕ ಭಾವ, ರೈತನ ಮಗನ ಚಿನ್ನದ ಫಸಲು, ಸೈನಿಕನ ಮಗಳ ಬಂಗಾರದ ಬೇಟೆ,  ಶಿವಮೊಗ್ಗ ಪಶು ಮಹಾವಿದ್ಯಾಲಯದ ಕನಿಕ ಯಾದವ್ 13 ಚಿನ್ನದ ಪದಕ, ಬೆಂಗಳೂರು ಪಶು ಮಹಾವಿದ್ಯಾಲಯದ ಕಿರಣ ದರೂರ 9 ಚಿನ್ನದ ಪದಕ ಹಾಗೂ ಹಾಸನ ಪಶು ಮಹಾವಿದ್ಯಾಲಯದ ರಜತ್ 6 ಚಿನ್ನದ ಪದಕ ಬಾಚಿಕೊಳ್ಳುವ ಮೂಲಕ ಸೈ ಎನಿಸಿಕೊಂಡಿದ್ದಾರೆ. 

ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ 4 'ENBA' ಪ್ರಶಸ್ತಿ, ಬೆಸ್ಟ್ ಕರೆಂಟ್ ಅಫೇರ್ಸ್‌ನಲ್ಲಿ ಚಿನ್ನ

ಬೀದರ್ ತಾಲೂಕಿನ ಜನವಾಡ ಬಳಿಯ ನಂದಿನಗರದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಜಾನಿಗಳ ವಿಶ್ವವಿದ್ಯಾಲಯದ 12 ಘಟಿಕೋತ್ಸ ನಡೆಯಿತು. ವಿಶ್ವವಿದ್ಯಾಲಯದ ಕುಲಾಧಿಪತಿಯಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿದ್ದರು. ಈ ಘಟಿಕೋತ್ಸವದಲ್ಲಿ 1012 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು. 735 ಸ್ನಾತಕ, 215 ಸ್ನಾತಕೋತ್ತರ ಹಾಗೂ 62 ಡಾಕ್ಟರೇಟ್ ಪದವಿಧರರಿದ್ದರು. ಒಟ್ಟು 154 ಚಿನ್ನದ ಪಡೆದ ವಿದ್ಯಾರ್ಥಿಗಳಿದ್ದರೆ ಅತಿ ಹೆಚ್ಚು 13 ಚಿನ್ನದ ಪದಕವನ್ನ ಹರಿಯಾಣ ರಾಜ್ಯದ ಶಿವಮೊಗ್ಗ ಪಶು ವಿದ್ಯಾಲಯದ ಸೈನಿಕನ ಮಗಳು ಕನಿಕಾ ಯಾದವ್ ಬಾಚಿಕೊಂಡರು. ಇನ್ನೂ ಬೆಳಗಾವಿ ಜಿಲ್ಲೆಯ ರಾಯಬಾಗದ ಬೆಂಗಳೂರು ಪಶುವಿಶ್ವವಿದ್ಯಾಲಯದ ಕಿರಣ ದರೂರ್ 9 ಚಿನ್ನದ ಪದಕವನ್ನ ಪಡೆಯುವುದರ ಮೂಲಕ ಬಂಗಾರ ಪದಕವನ್ನ ರೈತನಾದ ತನ್ನ ತಂದೆಗೆ ಅರ್ಪಿಸಿದರು. 

ಈ ಚಿನ್ನದ ಪದಕ ಪಡೆದುಕೊಂಡು ಈ ಮೂರು ವಿದ್ಯಾರ್ಥಿಗಳು ರೈತರ ಸೇವೆ ಮಾಡಬೇಕೆಂದುಕೊಂಡಿದ್ದಾರೆ. ತಾವು ಕಷ್ಟಪಟ್ಟು  ಓದಿದ ಜ್ಜಾನವನ್ನ ಬಳಸಿಕೊಂಡು ಹೊಸ ಹೊಸ ಅವಿಷ್ಕಾರಗಳನ್ನ ಮಾಡಿ ಇದರಿಂದ ರೈತರಿಗೆ ಅನೂಕೂಲ ಮಾಡಿಕೊಡಬೇಕೆಂದು ಒಬ್ಬೊಬ್ಬರು ಒಂದೊಂದು ಗುರಿಯನ್ನ ಇಟ್ಟುಕೊಂಡಿದ್ದಾರೆ.

ಪಿಎಸ್‌ಐ ನೇಮಕಾತಿ ಹಗರಣದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಪೊಲೀಸ್ ಬಲೆಗೆ ಬಿದ್ದಿದ್ಹೇಗೆ?

ಇನ್ನೂ 13 ಚಿನ್ನದ ಪದಕ ಪಡೆದುಕೊಂಡಿರುವ ಕನಿಕ ಯಾದವ್ ಗಡಿಯಲ್ಲಿ ನಿಂತು ದೇಶ ಕಾಯುವ ಬಿಎಸ್ ಎಫ್ ಯೋಧನ ಮಗಳಾಗಿದ್ದಾಳೆ. 2019-20ನೇ ಸಾಲಿನ ಸ್ನಾತಕ ಪದವಿ ವಿಭಾಗದ ಬಿವಿಎಸ್ ಸಿ ಮತ್ತು ಎಎಚ್ ವಿಭಾಗದಲ್ಲಿ ದಾಖಲೆಯ 13 ಚಿನ್ನದ ಪದಕವನ್ನ ಬಾಚಿಕೊಂಡಿದ್ದಾಳೆ. ಕನಿಕಾ ಸಾಧನೆಯನ್ನ ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ. ಮೂಲತಹ ಹರಿಯಾಣ ರಾಜ್ಯದ ರೇವಾರಿ ನಿವಾಸಿಯಾಗಿರುವ ಕನಿಕ ಯಾದವ್ ಅವರ ತಂದೆ ಸುನೀಲ್ ಕುಮಾರ್ ಯಾದವ್ ಬಿಎಸ್ ಎಸ್ ಎಫ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ತಾಯಿ ಸುನೀತಾ ಯಾದವ್ ಗೃಹಿಣಿಯಾಗಿದ್ದಾರೆ. ಇನ್ನೂ 9 ಚಿನ್ನದ ಪದಕ ಪಡೆದಿರುವ ಕಿರಣ ದರೂರ್ 2020-21 ನೇ ಸಾಲಿನಲ್ಲಿ ಬಿವಿಎಸ್ ಸಿ ಮತ್ತು ಎಎಚ್ ವಿಭಾಗದ ಸ್ನಾತಕ ಪದವಿ ಕೋರ್ಸ್ ನಲ್ಲಿ ಬೆಂಗಳೂರು ಪಶು ವಿದ್ಯಾಲಯದ ಕಿರಣ ದರೂರ್ 9 ಚಿನ್ನದ ಪದಕಗಳನ್ನ ಬಾಚಿಕೊಂಡು ರೈತ ದಂಪತಿಯ ಮಗನಾದ ಕಿರಣ ಚಿನ್ನದ ಫಸಲನ್ನೆ ತೆಗೆದಿದ್ದಾನೆ. ಮೂಲತಹ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದ ನಿವಾಸಿಯಾಗಿರುವ ಕಿರಣ ದರೂರ್ ತಂದೆ ಮಹದೇವ್ ದರೂರ್ ತಾಯಿ ನಿರ್ಮಿಲಾ ಕೃಷಿಕರಾಗಿದ್ದಾರೆ. ಕೃಷಿ ಕುಟುಂಬದಲ್ಲಿ ಜನಿಸಿದ ಇವರು ಕೃಷಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಬೇಕು ಅಂದುಕೊಂಡಿದ್ದಾರೆ. ಇನ್ನೂ 6 ಚಿನ್ನದ ಪದಕ ಪಡೆದುಕೊಂಡಿರುವ ಬೆಂಗಳೂರು ನಿವಾಸಿ ರಜತ್ ತಮ್ಮ ಖುಷಿಯನ್ನ ಹಂಚಿಕೊಂಡಿದ್ದು ಹೀಗೆ.