Jul 9, 2021, 6:19 PM IST
ಮಂಗಳೂರು (ಜು. 09): ಬಂಟ್ವಾಳ ತಾಲೂಕಿನ ಚೆಂಡ್ತಿಮಾರ್ ಮತ್ತು ಮಣಿಹಳ್ಳ ಪರಿಸರ ವ್ಯಾಪ್ತಿಯಲ್ಲಿ ವಾಸಿಸುವ ಜನರು ನೆಟ್ ವರ್ಕ್ ಸಮಸ್ಯೆ ಅನುಭವಿಸುತ್ತಿದ್ದು, ಆನ್‌ಲೈನ್‌ನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಡು ಅಯ್ಯೋ ಎನ್ನುವಂತಿದೆ.
ಸುಳ್ಯ: ವಿದ್ಯಾರ್ಥಿಗಳಿಗೆ ಸಿಗದ ನೆಟ್ವರ್ಕ್, ಬೆಟ್ಟದ ಮೇಲಿನ ಟೆಂಟೇ ಪಾಠಶಾಲೆ!
ಈ ಊರ ಮಕ್ಕಳು ಆನ್‌ಲೈನ್ ಪಾಠ ಕೇಳಬೇಕಾದರೆ ನದಿ ತಟಕ್ಕೆ ಹೋಗಲೇ ಬೇಕು, ಆಫ್‌ಲೈನ್ ಪಾಠಗಳ ಡೌನ್ ಲೋಡ್ ಗೂ ನದಿ ತಟವೇ ಗತಿ, ಹೋಮ್ ವರ್ಕ್ ಕಳುಹಿಸಬೇಕಾದರೆ ನದಿ ತಟದಲ್ಲೇ ಒಂದಷ್ಟುಹೊತ್ತು ಕಳೆಯಲೇಬೇಕು. ಅಂದ ಹಾಗೆ ಇದು ಯಾವುದೋ ಕುಗ್ರಾಮದ ಕಥೆಯಲ್ಲ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಚೆಂಡ್ತಿಮಾರ್-ಮಣಿಹಳ್ಳ ಪರಿಸರದ ಮಕ್ಕಳ ವ್ಯಥೆ ಇದು!