Apr 25, 2022, 10:51 AM IST
ಬೆಂಗಳೂರು (ಏ. 25): ಕಳೆದ ವರ್ಷದಂತೆ ಈ ವರ್ಷ ಪಿಯು ಫಲಿತಾಂಶ (PU Result) ತಡವಾಗಲ್ಲ. ಜೂನ್ ಕೊನೆಯ ವಾರದಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬರುವುದು ಪಕ್ಕಾ ಆಗಿದೆ. ಒಂದೊಂದು ವಿಷಯ ಪರೀಕ್ಷೆ ಆಗುತ್ತಿದ್ದಂತೆ ಮೌಲ್ಯಮಾಪನ ಶುರುವಾಗುತ್ತದೆ.
ಜೂನ್ ಕೊನೆಯ ವಾರ ಪಿಯುಸಿ ಪರೀಕ್ಷೆ ಫಲಿತಾಂಶ ಹೊರ ಬರುವುದು ಪಕ್ಕಾ ಆಗಿದೆ. ಮೇ. 20 ರಿಂದ ಜೂನ್ 15 ರೊಳಗೆ ಮೌಲ್ಯಮಾಪನ ಕಂಪ್ಲೀಟ್ ಆಗಬೇಕು, ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು, ಹಾಗಾಗಿ ಆದಷ್ಟು ಬೇಗ ಫಲಿತಾಂಶ ನೀಡುತ್ತೇವೆ ಎಂದು ಪಿಯು ಬೋರ್ಡ್ ನಿರ್ದೇಶಕ ಆರ್ ರಾಮಚಂದ್ರನ್ ಹೇಳಿದ್ದಾರೆ.