ಸುವರ್ಣ ನ್ಯೂಸ್‌ನಿಂದ 'ಈ ವರ್ಷ ಅರ್ಧ ಫೀಸ್‌' ಅಭಿಯಾನ; ಶಿಕ್ಷಣ ಸಚಿವರೇ ಗಮನಿಸಿ

Jun 10, 2020, 3:09 PM IST

ಬೆಂಗಳೂರು (ಜೂ. 10): SSLC ಪರೀಕ್ಷೆ ಬೇಕು? ಬೇಡ ಚರ್ಚೆ ಮಧ್ಯೆಯೇ ಮತ್ತೊಂದು ಅಭಿಯಾನ ಶುರುವಾಗಿದೆ. ಯಾವಾಗಲೂ ಸಮಾಜಮುಖಿ ಚರ್ಚೆಯನ್ನು, ಅಭಿಯಾನವನ್ನು ಹುಟ್ಟು ಹಾಕುವ ಸುವರ್ಣ ನ್ಯೂಸ್ ಇದೀಗ ಅಂತಹದೇ ಅಭಿಯಾನ ' ಈ ವರ್ಷ ಅರ್ಧ ಫೀಸ್‌' ಹುಟ್ಟುಹಾಕಿದೆ.

ಕೊರೋನಾ ಆತಂಕ: ಸ್ವಯಂ ನಿವೃತ್ತಿ ಯೋಜನೆ ಘೋಷಿಸಿದ ಕೆಎಸ್‌ಆರ್‌ಟಿಸಿ 

ಲಾಕ್‌ಡೌನ್‌ನಿಂದ ಸಂಬಳ ಕಡಿತ, ಉದ್ಯೋಗ ಕಡಿತದಿಂದ ಪೋಷಕರು ಕಂಗಾಲಾಗಿದ್ದಾರೆ. ಜೊತೆಗೆ ಕೆಲವು ಶಾಲೆಗಳು ಬಲವಂತವಾಗಿ ಪೋಷಕರಿಂದ ಅಧಿಕ ಫೀಸ್ ವಸೂಲಿಗಿಳಿದಿವೆ ಎಂಬ ಸುದ್ದಿ ವರದಿಯಾಗಿದೆ. ಮಕ್ಕಳ ಶಾಲಾ ಫೀಸ್ ಕಟ್ಟಲಾಗದೇ ಎಷ್ಟೋ ಪೋಷಕರು ಸಂಕಷ್ಟದಲ್ಲಿದ್ದಾರೆ. ಕೆಲಸ ಇಲ್ಲ, ಸಂಬಳ ಕಡಿತ, ಮನೆ ಬಾಡಿಗೆ ಕಟ್ಟಬೇಕು, ದಿನಸಿ, ಔಷಧ, ಲೋನ್‌ಗಳು, ಹೀಗೆ ಕಮಿಂಟ್‌ಮೆಂಟ್‌ ಗಳ ಮಧ್ಯೆ ಹೆಚ್ಚುವರಿ ಫೀಸನ್ನು ಹೇಗೆ ಹೊಂದಿಸೋದು ಎಂದು ಚಿಂತಿಸುತ್ತಿದ್ದಾರೆ. ಅಂತವರ ಧ್ವನಿಯಾಗಿ ನಿಮ್ಮ ಸುವರ್ಣ ನ್ಯೂಸ್ 'ಈ ವರ್ಷ ಅರ್ಧ ಫೀಸ್' ಅಭಿಯಾನವನ್ನು ಶುರು ಮಾಡಿದೆ.