625ಕ್ಕೆ 616: ಕಾರ್ಮಿಕನ ಮಗಳ ಎಸ್‌ಎಸ್‌ಎಲ್‌ಸಿ ಸಾಧನೆ

11, Aug 2020, 10:21 PM

ಮೈಸೂರು, (ಆ.11):  ಕಲ್ಲು ಗಣಿ ಕ್ರಷರ್ ಕಾರ್ಮಿಕನ ಮಗಳ ಎಸ್‌ಎಸ್‌ಎಲ್‌ಸಿ ಸಾಧನೆ. ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿನಿ ಮೈಸೂರು ಜಿಲ್ಲೆಗೆ ಪ್ರಥಮ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 616 ಅಂಕ ಪಡೆದ ವಿದ್ಯಾರ್ಥಿನಿ.

ಕಲಿಯೋಕೆ ಯಾವ ವಯಸ್ಸಾದ್ರೇನು, ಶಿಕ್ಷಣ ಸಚಿವ ಈಗ ಪಿಯುಸಿ ವಿದ್ಯಾರ್ಥಿ...!

ಸತೀಶ್ ಮತ್ತು ಜ್ಯೋತಿ ದಂಪತಿಯ ಮೊದಲ ಪುತ್ರಿ ಮಹಿಮಾ ಸಾಧನೆ. ಕಲ್ಲು ಗಣಿಗಾರಿಕೆಯ ಕ್ರಷರ್ ನಲ್ಲಿ ಕೆಲಸ ನಿರ್ವಹಿಸುವ ಸತೀಶ್. ನಂಜನಗೂಡು ತಾಲೂಕಿನ ಹುಣಸನಾಳು ಗ್ರಾಮದ ಕುಟುಂಬ. ನಂಜನಗೂಡು ಪಟ್ಟಣದ ಸರ್ಕಾರಿ ಆದರ್ಶ ಶಾಲೆ ವಿದ್ಯಾರ್ಥಿನಿ. ಮುಂದೆ ಐಐಟಿ ಮಾಡಿ ದೊಡ್ಡ ಹುದ್ದೆಯನ್ನು ಪಡೆಯುವ ಮಹದಾಸೆ.