ಒಂದು ಸಣ್ಣ ಸೊಳ್ಳೆ ಎಷ್ಟೊಂದು ದೊಡ್ಡ ಸಮಸ್ಯೆ ಉಂಟು ಮಾಡಬಲ್ಲುದು ಎಂಬೋದು ಅದನ್ನು ಅನುಭವಿಸಿದವರಿಗೆ ಗೊತ್ತು. ಡೆಂಗ್ಯೂ ಎಂಬ ಮಹಾಮಾರಿ ಒಂದಲ್ಲ ಎರಡೆರಡು ಬಾರಿ ಕಾಡಿದರೆ ವ್ಯಕ್ತಿಯ ಸ್ಥಿತಿ ಹೇಗಾಗಬೇಡ? ಮಹಿಳಾ ನವೋದ್ಯಮಿ ರೀನಾ, ಅಂತಹ ನರಕ ಯಾತನೆಯನ್ನು ಅನುಭವಿಸಿದ್ದಾರೆ. ಪ್ರತಿಯೊಂದು ನಿಮಿಷವೂ ಅತ್ಯಮೂಲ್ಯವಾಗಿರುವ ಸನ್ನಿವೇಶದಲ್ಲಿ ತಿಂಗಳುಗಟ್ಟಲೇ ಹಾಸಿಗೆಯಲ್ಲಿ ಮಲಗಿದ್ದಾರೆ. ಡೆಂಗ್ಯೂ ವಿರುದ್ಧ ಹೋರಾಟದಲ್ಲಿ ರೀನಾ ತಮ್ಮ ಅನುಭವಗಳನ್ನು ಹಂಚಿಕೊಂಡಿರುವುದು ಹೀಗೆ...