IPL 2021: CSK ವಿರುದ್ದದ ಪಂದ್ಯಕ್ಕೂ ಮುನ್ನ ಭರ್ಜರಿ ವರ್ಕೌಟ್‌ ಮಾಡಿದ ವಿರಾಟ್ ಕೊಹ್ಲಿ..!

IPL 2021: CSK ವಿರುದ್ದದ ಪಂದ್ಯಕ್ಕೂ ಮುನ್ನ ಭರ್ಜರಿ ವರ್ಕೌಟ್‌ ಮಾಡಿದ ವಿರಾಟ್ ಕೊಹ್ಲಿ..!

Suvarna News   | Asianet News
Published : Sep 24, 2021, 06:18 PM IST

ಫ್ಲೇ ಆಫ್‌ಗೇರುವ ನಿಟ್ಟಿನಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ಪಾಲಿಗೆ ಈ ಪಂದ್ಯ ಸಾಕಷ್ಟು ಮಹತ್ವದ್ದಾಗಿದೆ. ಇದೇ ವೇಳೆ ಮಹತ್ವದ ಪಂದ್ಯಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟಯ ವೈರಲ್‌ ಆಗಿದೆ. ಎರಡೂ ಕೈನಲ್ಲಿ ಡಂಬಲ್ಸ್‌ ಹಿಡಿದು ಒಂದೇ ಕಾಲಿನಲ್ಲಿ ನಿಂತು ಸ್ಕಾಟ್‌ ಮಾಡುತ್ತಿರುವ ವಿಡಿಯೋ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. 

ಶಾರ್ಜಾ(ಸೆ.24): 14ನೇ ಆವೃತ್ತಿಯ ಐಪಿಎಲ್(IPL 2021) ಟೂರ್ನಿಯ 35ನೇ ಪಂದ್ಯದಲ್ಲಿಂದು ಮೂರು ಬಾರಿಯ ಐಪಿಎಲ್ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌(CSK) ತಂಡವಿಂದು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ಫ್ಲೇ ಆಫ್‌ಗೇರುವ ನಿಟ್ಟಿನಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ಪಾಲಿಗೆ ಈ ಪಂದ್ಯ ಸಾಕಷ್ಟು ಮಹತ್ವದ್ದಾಗಿದೆ. ಇದೇ ವೇಳೆ ಮಹತ್ವದ ಪಂದ್ಯಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ(Virat Kohli) ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟಯ ವೈರಲ್‌ ಆಗಿದೆ. ಎರಡೂ ಕೈನಲ್ಲಿ ಡಂಬಲ್ಸ್‌ ಹಿಡಿದು ಒಂದೇ ಕಾಲಿನಲ್ಲಿ ನಿಂತು ಸ್ಕಾಟ್‌ ಮಾಡುತ್ತಿರುವ ವಿಡಿಯೋ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. 

ಟೀಂ ಇಂಡಿಯಾ(Team India) ನಾಯಕ ವಿರಾಟ್ ಕೊಹ್ಲಿ ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ವರ್ಕೌಟ್‌ ಮಾಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಮುಂಬರುವ ಟಿ20 ವಿಶ್ವಕಪ್(T20 World Cup) ಟೂರ್ನಿ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ 14ನೇ ಆವೃತ್ತಿಯ ಐಪಿಎಲ್ ಮುಕ್ತಾಯದ ಬಳಿಕ ಆರ್‌ಸಿಬಿ ತಂಡದ ನಾಯಕತ್ವದಿಂದಲೂ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ.
 

02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
03:05ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯ: ಹೇಗಿದೆ ಪಾರ್ಕಿಂಗ್ ವ್ಯವಸ್ಥೆ? ಏನೆಲ್ಲಾ ಸೌಲಭ್ಯ?
03:21ಐಪಿಎಲ್ ಕಪ್‌ ಗೆಲ್ಲಲೇ ಬೇಕು! ಆರ್‌ಸಿಬಿ ಜೆನ್‌ಝಿ, ಜೆನ್‌ ಆಲ್ಫಾಗೆ ಭಾರೀ ನಿರೀಕ್ಷೆ!
03:09ಆರ್‌ಸಿಬಿ ಈ ಬಾರಿಯೂ ಕಪ್‌ ಗೆಲ್ಲುತ್ತಾ? ಜೆನ್‌ಝಿ, ಜೆನ್‌ ಆಲ್ಫಾ ಫ್ಯಾನ್ಸ್ ಹೇಳೋದೇನು?
01:50ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
01:58ಮುಂದುವರಿದ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
02:08ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು
02:18ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
02:04Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
03:08Asia Cup 2025: ಹಲವು ಗಾಸಿಪ್‌ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!